ಉದ್ಯೋಗ ಸೃಷ್ಟಿ: ನಾಲ್ಕೂವರೆ ವರ್ಷದಲ್ಲಿ ಮೋದಿ ಸಾಧನೆ ಏನು?

ಡಿಜಿಟಲ್ ಕನ್ನಡ ಟೀಮ್:

2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಜಯಭೇರಿ ಬಾರಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ 2014ರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳಲ್ಲಿ ಎಷ್ಟು ಭರವಸೆಗಳು ಈಡೇರಿವೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದರಲ್ಲೂ ಉದ್ಯೋಗ ಕ್ಷೇತ್ರದಲ್ಲಿನ ಮೋದಿ ಸಾಧನೆ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬೀಳಲಿದೆ.

ಕಳೆದ ಚುನಾವಣೆ ಸಂದರ್ಭದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಕಳೆದ ನಾಲ್ಕೂವರೆ ವರ್ಷದಲ್ಲಿ ಸಾಧಿಸಿದ್ದೇಷ್ಟು? ಈ ಪ್ರಶ್ನೆಗೆ ಉತ್ತರ ಹೀಗಿದೆ…

ಕಳೆದ ನಾಲ್ಕೈದು ವರ್ಷಗಳಲ್ಲಿ ನಮ್ಮ ಸರ್ಕಾರ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಕೇಂದ್ರ ಹೆಳಿಕೊಳ್ಳುತ್ತಿದೆ. ಸರ್ಕಾರದ ಈ ಕೋಟಿಯ ಲೆಕ್ಕ ಸರ್ಕಾರಿ ಉದ್ಯೋಗ, ಕೈಗಾರಿಕೆ, ಖಾಸಗಿ ಉದ್ಯೋಗಗಳ ಜತೆ ಸ್ವಯಂ ಉದ್ಯೋಗವನ್ನು ಒಳಗೊಂಡಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸ್ವಯಂ ಉದ್ಯೋಗ ಸೃಷ್ಠಿ. ಕಾರಣ, ಸರ್ಕಾರ ಹೇಳುತ್ತಿರುವ ಲೆಕ್ಕದಲ್ಲಿ ಸ್ವಯಂ ಉದ್ಯೋಗ ಹೆಚ್ಚಿನ ಪಾಲು ಹೊಂದಿದೆ. ಆದರೆ ಈ ಕುರಿತ ಸ್ಪಷ್ಟ ಅಂಕಿ ಅಂಶಗಳು ಹಾಗೂ ಅವುಗಳಿಗೆ ಪೂರಕ ದಾಖಲೆ ಇಲ್ಲ.

ಇನ್ನು ಕೈಗಾರಿಕೆ, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳನ್ನು ನೋಡುವುದಾದರೆ ಕೇಂದ್ರದ ಸಾಧನೆ ತೀರಾ ಕಳಪೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ಹೇಳುತ್ತಿವೆ. ಸದ್ಯ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಕಳೆದ ನಾಲ್ಕೈದು ವರ್ಷಗಳಲ್ಲಿ ಉದ್ಯೋಗ ಕುರಿತ ಸಾಧನೆ ಹೀಗಿದೆ…

 • ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ನಿರೀಕ್ಷೆ ಮಾಡಲಾಗಿದ್ದು, 10 ಕೋಟಿ ಉದ್ಯೋಗ. ಆದರೆ ಈವರೆಗೆ ಸೃಷ್ಠಿಸಿರೋದು ಕೇವಲ 27.5 ಲಕ್ಷ ಮಾತ್ರ. ಅಲ್ಲಿಗೆ ನಿರೀಕ್ಷೆಯಲ್ಲಿ ಸಾಕಾರವಾಗಿರೋದು ಕೇವಲ 2.75% ಮಾತ್ರ.
 • ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಮೂಲಕ ಸೃಷ್ಟಿ ಮಾಡಿರೋ ಉದ್ಯೋಗ 17.88 ಲಕ್ಷ.
 • ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯಲ್ಲಿ ಸಿಕ್ಕಿದ ಉದ್ಯೋಗ 5 ಲಕ್ಷ.
 • ದೀನ್ ದಯಾಳ್ ಉಪಾಧ್ಯಾಯ ಅಂತೊದಯ ಯೋಜನೆ ಮೂಲಕ ಸೃಷ್ಟಿಯಾದ ಉದ್ಯೋಗ 4.72 ಲಕ್ಷ.
 • ಇನ್ನು ಸರ್ಕಾರಿ ಉದ್ಯೋಗ ನೇಮಕದಲ್ಲೂ ಕೇಂದ್ರದ ಸಾಧನೆ ನಿರಾಶಾದಾಯಕ.
 • ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸರ್ಕಾರಿ ನೇಮಕಾತಿಯಲ್ಲಿ 38%ರಷ್ಟು ಕುಸಿತ.
 • ಯುಪಿಎಸ್ ಸಿ, ಎಸ್ ಎಸ್ ಸಿ ಹಾಗೂ ಆರ್ ಆರ್ ಬಿ ಮೂಲಕ ಉದ್ಯೋಗ ನೇಮಕ ಕುಸಿತ.
 • ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರಿ ಉದ್ಯೋಗ ನೇಮಕದಲ್ಲಿ ಗಣನೀಯ ಇಳಿಕೆ.
 • 2014-15 ರಲ್ಲಿ 1,13,524 ಸರ್ಕಾರಿ ಉದ್ಯೋಗ ನೇಮಕ.
 • 2015-16 ರಲ್ಲಿ 1,11,807 ಸರ್ಕಾರಿ ಉದ್ಯೋಗ ನೇಮಕ.
 • 2016-17 ರಲ್ಲಿ 1,00,938 ಸರ್ಕಾರಿ ಉದ್ಯೋಗ ನೇಮಕ.
 • 2017-18 ರಲ್ಲಿ 70,805 ಸರ್ಕಾರಿ ಉದ್ಯೋಗ ನೇಮಕ.

Leave a Reply