ದಾಳಿ ಮಾಡಿದ 100 ಗಂಟೆ ಒಳಗೆ ಕಾಶ್ಮೀರದಲ್ಲಿ ನಿಯಂತ್ರಣ ಕಳೆದುಕೊಂಡಿತೇ ಜೆಇಎಂ?

ಡಿಜಿಟಲ್ ಕನ್ನಡ ಟೀಮ್:

ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಕಣಿವೆ ರಾಜ್ಯದಲ್ಲಿ ನಿಯಂತ್ರಣ ಕಳೆದುಕೊಂಡಿತೇ? ಇಂತಹ ಪ್ರಶ್ನೆ ಹುಟ್ಟು ಕೊಂಡಿದೆ. ಅದಕ್ಕೆ ಕಾರಣ, ಸೋಮವಾರ ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಮಸೂದ್ ಅಜರ್ ನ ನಂಬಿಕಸ್ಥ ಉಗ್ರ ಶಿಷ್ಯ ಅಬ್ದುಲ್ ರಶೀದ್ ಘಾಝಿ ಹತ್ಯೆಯಾಗುವುದು.

ಹೌದು, ನಿನ್ನೆ ಕಾರ್ಯಾಚರಣೆ ಕುರಿತು ಮಂಗಳವಾರ ಮಾಹಿತಿ ನೀಡಿರುವ ಭಾರತೀಯ ಸೇನೆ ಹೇಳಿದೆ. ಕಾಶ್ಮೀರದಲ್ಲಿ ಜೆಇಎಂ ಸಂಘಟನೆಯ ನಾಯಕತ್ವವನ್ನೇ ನಾವು ಮಟ್ಟ ಹಾಕಿದ್ದೇವೆ ಎಂದು ತಿಳಿಸಿದ್ದಾರೆ.

ರಶೀದ್ ಘಾಝಿ ಅಫ್ಘಾನಿಸ್ತಾನದ ವಾರ್ ಲೀಡರ್, ಮಸೂದ್ ಅಜರ್ ಈತನನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ರವಾನಿಸಿ ಭಯೋತ್ಪಾದಕ ಕೃತ್ಯ ಎಸಗುವ ಜವಾಬ್ದಾರಿ ವಹಿಸಿದ್ದರು. ಈತನೇ ಪುಲ್ವಾಮ ದಾಳಿಯ ಆತ್ಮಾಹುತಿ ಬಾಂಬರ್ನಿಗೆ ತರಬೇತಿ ನೀಡಿ ಕಾರ್ಯಾಚರಣೆಗೆ ಪ್ಲಾನ್ ಮಾಡಿದ್ದ. ಈತನ ಸಾವಿನೊಂದಿಗೆ ಇದೀಗ ಕಾಶ್ಮೀರದಲ್ಲಿ ಜೆಇಎಂ ಬಹುತೇಕ ತನ್ನ ಅಸ್ಥಿತ್ವ ಕಳೆದುಕೊಂಡಿದ್ದು, ಕಣಿವೆ ರಾಜ್ಯದಲ್ಲಿ ಜೆಇಎಂಗೆ ನಾಯಕನೇ ಇಲ್ಲದಂತಾಗಿದೆ. ಇದರಿಂದಾಗಿ ಸದ್ಯ ಜೆಇಎಂ ಕಣಿವೆ ರಾಜ್ಯದಲ್ಲಿ ಸೂತ್ರ ಹರಿದ ಗಾಳಿಪಟದಂತಾಗಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹಿರಿಯ ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಹೆಳಿದ್ದೀಷ್ಟು…

‘ಕಣಿವೆ ರಾಜ್ಯದಲ್ಲಿ ಯಾರೇ ಆಗಲಿ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು ಖಂಡಿತಾ ಉಳಿಯಲು ಬಿಡುವುದಿಲ್ಲ. ಅಂತೆಯೇ ಉಗ್ರರಿಗೆ ಶರಣಾಗತಿಗೆ ಒಂದು ಅವಕಾಶ ನೀಡುತ್ತೇವೆ. ಉಗ್ರತ್ವ ಬಿಟ್ಟು ಶರಣಾಗತಿಯಾದರೆ ಬದುಕಲು ಒಂದು ಅವಕಾಶ ನೀಡುತ್ತೇವೆ. ಇಲ್ಲವಾದಲ್ಲಿ ನರಕಕ್ಕೆ ಕಲಿಸುತ್ತೇವೆ.

ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ನಿಮ್ಮ ಮಕ್ಕಳಿಗೆ ಬುದ್ದಿಮಾತು ಹೇಳಿ ಮನೆಗೆ ಕರೆಸಿಕೊಳ್ಳಿ, ಅವರು ಸೇನೆ ಕೈಗೆ ಸಿಕ್ಕರೆ ಖಂಡಿತಾ ಮನೆಗೆ ಜೀವಂತವಾಗಿ ಮರಳುವುದಿಲ್ಲ. ಎನ್`ಕೌಂಟರ್ ವೇಳೆ ಸ್ಥಳದಲ್ಲಿ ಸೇನೆಯ ಕಾರ್ಯಾಚರಣೆಗೆ ಅಡ್ಡಿ ಪಡಿಸುವ ಯುವಕರಿಗೂ ಸೇನೆ ಎಚ್ಚರಿಕೆ ನೀಡಿದ್ದು, ನಮಗೆ ನಾಗರಿಕರ ಸಾವು ಬೇಕಿಲ್ಲ. ಆದರೆ ಅನಿವಾರ್ಯತೆ ಎದುರಾದರೆ ಅದಕ್ಕೂ ಹಿಂಜರಿಯುವುದಿಲ್ಲ. ಎನ್`ಕೌಂಟರ್ ಆದ ಬಳಿಕವೂ ಕೂಡ ಸಂಪೂರ್ಣ ಶೋಧಕಾರ್ಯ ಪೂರ್ಣಗೊಳ್ಳುವವರೆಗೂ ಯಾರೂ ಕೂಡ ಘಟನಾ ಪ್ರದೇಶಕ್ಕೆ ಬರಬಾರದು.

ಸೋಮವಾರ ನಡೆದ 16 ಗಂಟೆಗಳ ಎನ್​ಕೌಂಟರ್​ನಲ್ಲಿ ಹತ್ಯೆಯಾದವರನ್ನು ಅಬ್ದುಲ್ ರಷೀದ್ ಘಾಜಿ ಅಲಿಯಾಸ್ ಕಮ್ರಾನ್ ಹಾಗೂ ಹಿಲಾಲ್ ಎಂದು ಗುರುತಿಸಲಾಗಿದೆ. ಇವರಲ್ಲಿ ಅಬ್ದುಲ್ ರಷೀದ್ ಪುಲ್ವಾಮದ ಉಗ್ರ ದಾಳಿಯ ಸೂತ್ರಧಾರ. ಇನ್ನು, ಅಬ್ದುಲ್ ರಷೀದ್ ಜೈಷೆ ಮೊಹಮ್ಮದ್ ಸಂಘಟನೆಯ ಡಿವಿಷನಲ್ ಕಮಾಂಡರ್ ಆಗಿದ್ದರು.’

Leave a Reply