ಕುಲಭೂಷಣ್ ಪ್ರಕರಣ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆ!

ಡಿಜಿಟಲ್ ಕನ್ನಡ ಟೀಮ್:

ಹಗೆಯಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ.

ಹತ್ತು ನ್ಯಾಯಾಧೀಶರ ಉನ್ನತ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ಪಾಕಿಸ್ತಾನ ಮನವಿ ಮಾಡಿತು. ಆದರೆ ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.

ಪಾಕಿಸ್ತಾನದ ಪರ ಆಡ್ ಹಾಕ್ ಜಡ್ಜ್ ಅವರಿಗೆ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಹೊಸ ಆಡ್ ಹಾಕ್ ಜಡ್ಜ್ ನೇಮಕ ಮಾಡಬೇಕು. ಅಲ್ಲಿಯವರೆಗೂ ಪ್ರಕರಣದ ವಿಚಾರಣೆ ಮುಂದಕ್ಕೆ ಹಾಕಲು ಪಾಕ್ ಮನವಿ ಮಾಡಿತು.

ಸೋಮವಾರದಿಂದ ಆರಂಭವಾದ ಸರಣಿ ವಿಚಾರಣೆಯಲ್ಲಿ ಮೊದಲ ದಿನ ಭಾರತ ತನ್ನ ವಾದ ಮಂಡಿಸಿ, ‘ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದಲ್ಲಿ ಜಾಧವ್ ಜ್ ತನ್ನ ಪರ ವಾದ ಮಂಡಿಸಲು ಅಗತ್ಯ ವಕೀಲರನ್ನು ನೀಡಿಲ್ಲ. ಅದರೊಂದಿಗೆ ವಿಯೆನ್ನಾ ಒಪ್ಪಂದ ಉಲ್ಲಂಘನೆಯಾಗಿದೆ. ಹೀಗಾಗಿ ಜಾಧವ್ ಬಿಡುಗಡೆಗೆ ಮಾಡಬೇಕು’ ಎಂದು ಮನವಿ ಮಾಡಿತು.

Leave a Reply