ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ! ಮಾ.6ರವರೆಗೂ ಪರಪ್ಪನ ಅಗ್ರಹಾರ ಜೈಲಲ್ಲಿ ವಾಸ!

ಡಿಜಿಟಲ್ ಕನ್ನಡ ಟೀಮ್:

ಕಳೆದ ತಿಂಗಳು ಬಿಡದಿಯ ಈಗಲ್ಟನ್ ರೆಸ್ಟಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಗಣೇಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿ ಕೋರ್ಟ್ ಆದೇಶ ನೀಡಿದೆ.

ಬುಧವಾರ ಗುಜರಾತಿನ ಸೋಮನಾಥದಲ್ಲಿ ಗಣೇಶ್ ಅವರನ್ನು ಬಂಧಿಸಿದ ಬಿಡದಿ ಪೊಲೀಸರು ಗುರುವಾರ ರಾಮನಗರದ ಸಿಜೆಎಂ ಕೋರ್ಟ್ ಮುಂದೆ ಹಾಜರುಪಡಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಅನಿತಾ ಅವರು ಪೊಲೀಸರ ಮನವಿ ಮೇರೆಗೆ ಗಣೇಶ್ ಅವರನ್ನು ವಿಚಾರಣಾ ಖೈದಿಯನ್ನಾಗಿ ಪರಿಗಣಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಮಾರ್ಚ್ 6ರವರೆಗೂ ಗಣೇಶ್ ಅವರು ನ್ಯಾಯಾಂಗ ಬಂಧನದಲ್ಲಿರಲಿದ್ದು, ಅವರ ಆರೋಗ್ಯಕ್ಕೆ ಸಮಸ್ಯೆ ಹಿನ್ನೆಲೆಯಲ್ಲಿ ಗಣೇಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲು ನಿರ್ಧರಿಸಲಾಗಿದೆ. ಅಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ವಿಚಾರಣೆ ನಡೆಸಲಾಗುತ್ತದೆ. ಅದರೊಂದಿಗೆ ಕಂಪ್ಲಿ ಶಾಸಕರು ಕಂಬಿ ಹಿಂದೆ ವಿಚಾರಣಾ ಖೈದಿಯಾಗಿ ಕಾಲ ಕಳೆಯಬೇಕಾಗಿದೆ.

Leave a Reply