2019ರ ಚುನಾವಣೆ: ಕಾಂಗ್ರೆಸ್ ಗೆ ಹರಿದುಬಂದಿತು 15 ಲಕ್ಷ ಘೋಷವಾಕ್ಯಗಳ ಸಲಹೆ!

ಡಿಜಿಟಲ್ ಕನ್ನಡ ಟೀಮ್:

ಲೋಕ ಸಭೆ ಚುನಾವಣೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದ್ದು, ದೇಶದ ಎಲ್ಲ ಕಡೆಗಳಲ್ಲೂ ಚುನಾವಣೆ ನಿಧಾನವಾಗಿ ರಂಗೇರುತ್ತಿದೆ. ಪ್ರತಿ ಚುನಾವಣೆ ವೇಳೆಯೂ ರಾಜಕೀಯ ಪಕ್ಷಗಳು ತಮ್ಮ ಧ್ಯೇಯೋದ್ದೇಶಗಳನ್ನು ಜನರಿಗೆ ಮುಟ್ಟುವಂತಹ ಆಕರ್ಷಕ ಘೋಷವಾಕ್ಯದೊಂದಿಗೆ ಪ್ರಚಾರ ನಡೆಸುವುದು ಸಹಜ. ಈ ಬಾರಿಯ ಚುನಾವಣೆ ಘೋಷವಾಕ್ಯವನ್ನು ತಾವು ನಿರ್ಧರಿಸುವ ಬದಲು ಪಕ್ಷದ ಕಾರ್ಯಕರ್ತರ ಸಲಹೆ ಪಡೆಯಲು ಮುಂದಾಗಿರುವ ಕಾಂಗ್ರೆಸ್ ಗೆ ಈಗ ಘೋಷವಾಕ್ಯಗಳ ಮಳೆಯೇ ಸುರಿದಿದೆ. ಈರೆಗೂ ಒಟ್ಟು ಕಾಂಗ್ರೆಸ್ ಗೆ ದೇಶದ ವಿವಿಧ ಪ್ರದೇಶಗಳಿಂದ ಕೇಳಿ ಬಂದಿರುವ ಘೋಷವಾಕ್ಯಗಳ ಪ್ರಮಾಣ ಬರೋಬ್ಬರಿ 15 ಲಕ್ಷ!

ದೆಹಲಿಯಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಗೆ ಸುಮಾರು 15 ಲಕ್ಷ ಘೋಷವಾಕ್ಯಗ ಸಲಹೆ ಕೇಳಿ ಬಂದಿದ್ದು, ಇವುಗಳಲ್ಲಿ ಬಹುತೇಕ ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಗುರಾತಿ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿವೆ. ಈ ಘೋಷವಾಕ್ಯಗಳನ್ನು ಪರಿಷ್ಕರಿಸಿ 60 ಸಾವಿರಕ್ಕೆ ಇಳಿಸಲಾಗಿದ್ದು, ಇವುಗಳನ್ನು ಮುಂದಿನ ಹಂತದ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ. ಅಂತಿಮವಾಗಿ ಪ್ರಾದೇಶಿಕ ಭಾಷೆಗಳಿಂದ ತಲಾ 1 ಘೋಷವಾಕ್ಯಗಳನ್ನು ಆಯ್ಕೆ ಮಾಡಿ ಹಿಂದಿಯಿಂದ 10 ಘೋಷವಾಕ್ಯಗಳನ್ನು ಅಂತಿಮಗೊಳಿಸುತ್ತೇವೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ದತ್ತಾಂಶ ವಿಶ್ಲೇಷಣಾ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರರ್ತಿ ತಿಳಿಸಿದ್ದಾರೆ.

26 ರಾಜ್ಯಗಳ 493 ಕ್ಷೇತ್ರಗಳಿಂದ ಬಂದಿರುವ ಬಹುತೇಕ ಘೋಷವಾಕ್ಯಗಳು, ರೈತರು, ಯುವಕರು, ಉದ್ಯೋಗಕ್ಕೆ ಸಂಬಂಧಿಸಿದ್ದಾಗಿವೆ. ಕಾಂಗ್ರೆಸ್ ಹೈ ಕಮಾಂಡ್, ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಲು ಆರಂಭಸಿರುವ ‘ಶಕ್ತಿ ಆಯಪ್‘ ಮೂಲಕ ಘೋಷವಾಕ್ಯಗಳ ಸಲಹೆ ನೀಡುವಂತೆ ಕರೆ ನೀಡಿತ್ತು.

Leave a Reply