ಪುಲ್ವಾಮ ದಾಳಿ ಪ್ರತೀಕಾರಕ್ಕೆ 2ನೇ ಸರ್ಜಿಕಲ್ ಸ್ಟ್ರೈಕ್! ಇದು ಭಯೋತ್ಪಾದನೆ ವಿರುದ್ಧ ನವ ಭಾರತದ ಪ್ರತ್ಯುತ್ತರ

ಡಿಜಿಟಲ್ ಕನ್ನಡ ಟೀಮ್:

ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತ ಕೂಡ ವೈಮಾನಿಕ ದಾಳಿ ನಡೆಸಿದೆ.

ಮಂಗಳವಾರ ಬೆಳಗ್ಗೆ ಭಾರತೀಯ ವಾಯುಪಡೆ ಭಾರತ ಹಾಗೂ ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯಲ್ಲಿ ಇದ್ದ ಜೈಷ್ ಉಗ್ರ ಸಂಘಟನೆ ನೆಲೆಗಳ ಮೇಲೆ ದಾಳಿ. ನಡೆಸಿ 1000 ಕೆಜಿ ಬಾಂಬ್ ಹಾಕಿದೆ.

12 ಮಿರಾಜ್ 2000 ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಬಲಕೋಟ್, ಚಕೋಟಿ, ಮುಜಾಫರಬಾದ್ ನಲ್ಲಿರುವ ಜೈಷ್ ಉಗ್ರ ಸಂಘಟನೆಯ ನೆಲೆಗಳನ್ನು ಛಿಧ್ರಗೊಳಿಸಿದೆ. ಇನ್ನು ಉಗ್ರ ಸಂಘಟನೆಯ ಆಲ್ಫಾ 3 ಕಂಟ್ರೋಲ್ ರೂಮ್ ಗಳನ್ನು ಉಡಾಯಿಸಿದೆ.

Leave a Reply