ದೇಶ ಸುರಕ್ಷಿತ ಕೈಯಲ್ಲಿದೆ! ಪಾಕ್ ಮೇಲಿನ ದಾಳಿ ನಂತರ ಮೋದಿ ಅಭಯ!

ಡಿಜಿಟಲ್ ಕನ್ನಡ ಟೀಮ್:

‘ಭಾರತ ದೇಶ ಸುರಕ್ಷಿತ ಕೈಯಲ್ಲಿದೆ. ಹೀಗಾಗಿ ದೇಶದ ಯಾವುದೇ ಪ್ರಜೆ ಭಯಪಡುವ ಅಗತ್ಯವಿಲ್ಲ…’ ಇದು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ವಾಯುಪಡೆ ದಾಳಿ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ನೀಡಿದ ಅಭಯ.

ರಾಜಸ್ಥಾನದ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋದಿ ಹೇಳಿದ್ದಿಷ್ಟು…

‘ಭಾರತ ದೇಶ ಸುರಕ್ಷಿತ ಕೈಯಲ್ಲಿದೆ. ಯಾವತ್ತಿಗೂ ದೇಶ ತಲೆ ತಗ್ಗಿಸಲು ಬಿಡಲ್ಲ. ಇಂದು ನಮ್ಮ ದೇಶದ ವೀರ ಯೋಧರಿಗೆ ನಾವು ನಮಿಸುತ್ತಿರುವ ದಿನ. ನಮ್ಮ ವೀರ ಯೋಧರ ಸಾಧನೆ ಕೊಂಡಾಡುವ ದಿನ.’

ಇನ್ನು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ‘ಮೊದಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವವರಿಗೆ ನಾನು ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರುತ್ತೇನೆ. ನಾನು ಬೇರೊಂದು ಪ್ರಮುಖ ಕೆಲಸದಲ್ಲಿ ಇದ್ದ ಕಾರಣ ಈ ಕಾರ್ಯಕ್ರಮಕ್ಕೆ ಆಗಮಿಸಲು ತಡವಾಯಿತು’ ಎಂದು ಪರೋಕ್ಷವಾಗಿ ಪಾಕ್ ಮೇಲಿನ ವೈಮಾನಿಕ ದಾಳಿ ಬಗ್ಗೆ ತಿಳಿಸಿದರು.

Leave a Reply