ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ಗುರಿ ಇಟ್ಟಿದ್ದು ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮಂಗಳವಾರ ಬೆಳಗಿನ ಜಾವ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯನ್ನು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್ ಮೇಲೆ ಹೆಚ್ಚು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.

ಈ ದಾಳಿ ಗುಪ್ತಚರ ಇಲಾಖೆಯ ಕಾರ್ಯಾಚರಣೆಯೇ ಹೊರತು, ಪಾಕಿಸ್ತಾನದ ವಿರುದ್ಧ ಯುದ್ಧದ ಮಿಲಿಟರಿ ಕಾರ್ಯಾಚರಣೆ ಅಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟೀಕರಣ ನೀಡಿದೆ. ಇನ್ನು ಈ ದಾಳಿಯಲ್ಲಿ ಸೇನೆ ಬಾಲಕೋಟ್ ಅನ್ನು ಗುರಿಯಾಗಿಸಲು ಕಾರಣವಿದೆ. ಅದೇನೆಂದರೆ…

ಬಾಲಕೋಟ್ ಪ್ರದೇಶದಲ್ಲಿ ಜೈಷ್ ಎ ಮೊಹಮದ್ ಉಗ್ರ ಸಂಘಟನೆಯ ಶಿಬಿರವಿದ್ದು ಇಲ್ಲಿ ಜಿಹಾದಿಗಳಿಂದ ಯುವಕರ ಮನ ಕೆಡಿಸಿ ಅವರನ್ನು ಆತ್ಮಾಹುತಿ ಬಾಂಬರ್ ಗಳನ್ನಾಗಿ ಪರಿವರ್ತಿಸಲಾಗುತ್ತಿತ್ತು. ಈ ಎಲ್ಲ ಉಗ್ರ ಚಟುವಟಿಕೆಗಳ ಉಸ್ತುವಾರಿ ನಿರ್ವಹಿಸುತ್ತಿದ್ದವನು ಭಾರತದ ಗುಪ್ತಚರ ಇಲಾಖೆ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರುವ ಯೂಸುಫ್ ಅಜರ್ ಅಲಿಯಾಸ್ ಮೊಹಮದ್ ಸಲೀಮ್.

ಈತ ಬೇರಾರು ಅಲ್ಲ ಜೈಷ್ ಎ ಮೊಹಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನ ಸೋದರ ಸಂಬಂಧಿ. 1994 ರಲ್ಲಿ ಮಸೂದ್ ಅಜರ್ ನನ್ನು ಭಾರತ ಬಂಧಿಸಿದ್ದ ನಂತರ ಆತನನ್ನು ಬಿಡುಗಡೆ ಮಾಡಲು ಆಗ್ರಹಿಸಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ 1999 ರಲ್ಲಿIC 814 ವಿಮಾನವನ್ನು ಹೈಜಾಕ್ ಮಾಡಿತ್ತು. ಈ ವಿಮಾನ ಹೈಜಾಕ್ ಯೋಜನೆಯ ಮಾಸ್ಟರ್ ಮೈಂಡ್ ಆಗಿದ್ದವನು ಮೌಲಾನ ಯೂಸೂಫ್ ಅಜರ್.

ಈಗ ಭಾರತೀಯ ಸೇನೆ ಬಾಲಕೋಟ್ ಶಿಬಿರದ ಮೇಲೆ ದಾಳಿ ನಡೆಸಿ ಯೂಸುಫ್ ನನ್ನು ಹತ್ಯೆ ಮಾಡಿದೆ. ಅದರೊಂದಿಗೆ ತನ್ನ ಸೇಡು ತೀರಿಸಿಕೊಂಡಿದೆ.

Leave a Reply