ಕೊನೆಗೂ ಆಯ್ತು ಜೆಡಿಎಸ್ ನಿಗಮ ಮಂಡಳಿ ಅಧ್ಯಕ್ಷರ ನೇಮಕ! ಯಾರಿಗೆ ಯಾವ ನಿಗಮ?

ಡಿಜಿಟಲ್ ಕನ್ನಡ ಟೀಮ್:

ಕೊನೆಗೂ ಹಲವು ತಿಂಗಳಿನಿಂದ ಖಾಲಿ ಉಳಿದಿದ್ದ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನವನ್ನು ಜೆಡಿಎಸ್ ನೇಮಕ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಗಳವಾರ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನವಲಗುಂದ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಎನ್​.ಹೆಚ್. ಕೋನರೆಡ್ಡಿ ಅವರನ್ನು ನೇಮಕ ಮಾಡಲಾಗಿದ್ದು, ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಓರ್ವ ಜೆಡಿಎಸ್​ ಮುಖಂಡ ಸೇರಿದಂತೆ ಹತ್ತು ಶಾಸಕರು ಸೇರಿ ಒಟ್ಟು 11 ಮಂದಿಯನ್ನು ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಹಾಗೆಯೇ ನಾಲ್ವರು ಶಾಸಕರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ಆಯ್ಕೆಯಾದರು…

ಕೊಳಗೇರಿ ಅಭಿವೃದ್ಧಿ ಮಂಡಳಿ: ನಾಗನಗೌಡ

ಕರ್ನಾಟಕ ಪ್ರವಾಸೋದ್ಯಮ ನಿಗಮ: ರಾಜಾವೆಂಕಟಪ್ಪ ನಾಯಕ

ಎಂಎಸ್​ಐಲ್​: ಡಿ.ಸಿ. ಗೌರಿಶಂಕರ್

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ: ಬಿ. ಸತ್ಯನಾರಾಯಣ

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ: ನಿಸರ್ಗ ನಾರಾಯಣಸ್ವಾಮಿ

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ: ಕೆ. ಅನ್ನದಾನಿ

ಕರ್ನಾಟಕ ಗೃಹ ಮಂಡಳಿ: ಶಿವಲಿಂಗೇಗೌಡ

ಕೈಗಾರಿಕಾ ಮೂಲಸೌಕರ್ಯ ಅಭಿವೃದ್ದಿ ನಿಗಮ: ಕೆ. ಮಹದೇವ

ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ: ಜಫ್ರಲ್ಲಾ ಖಾನ್ (ಜೆಡಿಎಸ್ ಮುಖಂಡ)

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ: ಭೀಮಾ ನಾಯಕ್

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ: ವೆಂಕಟರಮಣಯ್ಯ

ಸಂಸದೀಯ ಕಾರ್ಯದರ್ಶಿಗಳು:

ಪಶುಸಂಗೋಪ ಮತ್ತು ಮೀನುಗಾರಿಕೆ ಸಚಿವರ ಕಾರ್ಯದರ್ಶಿ: ಶ್ರೀನಿವಾಸ್ ಮೂರ್ತಿ

ಸಹಕಾರ ಸಚಿವರ ಸಂಸದೀಯ ಕಾರ್ಯದರ್ಶಿ: ಎಂ. ಶ್ರೀನಿವಾಸ್

ಲೋಕೋಪಯೋಗಿ ಸಚಿವರ ಸಂಸದೀಯ ಕಾರ್ಯದರ್ಶಿ: ತಿಪ್ಪೇಸ್ವಾಮಿ

ಮುಖ್ಯಮಂತ್ರಿ (ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ) ಸಂಸದೀಯ ಕಾರ್ಯದರ್ಶಿ: ದೇವಾನಂದ್ ಚೌಹಾಣ್

Leave a Reply