ಭಾರತದ ಮೇಲೆ ದಾಳಿಗೆ ಪಾಕ್ ಪ್ರಯತ್ನ, ಸೈನಿಕರ ಏಟಿಗೆ ಹೇಡಿಗಳು ಪರಾರಿ!

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ಮಾಡಿದ ಬೆನ್ನಲ್ಲೇ ಈಗ ಪಾಕಿಸ್ತಾನ ವಾಯುಪಡೆ ಭಾರತದ ಗಡಿ ಪ್ರವೇಶಿಸಲು ಮುಂದಾಗಿದ್ದು, ನಮ್ಮ ಸೈನಿಕರು ಪಾಕ್ ಯುದ್ಧ ವಿಮಾನ ಎಫ್16 ಅನ್ನು ಹೊಡೆದುರುಳಿಸಿದೆ.

ಬುಧವಾರ ಜಮ್ಮು ಮತ್ತು ಕಾಶ್ಮೀರದ ನೌಶೆರಾ ಜಿಲ್ಲೆಯ ಗಡಿ ಪ್ರದೇಶದ ಮಾರ್ಗವಾಗಿ ಭಾರತ ಗಡಿ ಪ್ರವೇಶಿಸಿ ದಾಳಿ ನಡೆಸಲು ಪಾಕ್ ಯುದ್ಧ ವಿಮಾನಗಳು ಪ್ರಯತ್ನಿಸಿವೆ. ಈ ಪ್ರಯತ್ನವನ್ನು ಭಾರತೀಯ ಸೇನೆ ಯಶಸ್ವಿಯಾಗಿ ವಿಫಲಗೊಳಿಸಿದೆ.

ಜಮ್ಮು ಕಾಶ್ಮೀರದಲ್ಲಿ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುತ್ತಿರುವಾಗ ಪಾಕ್ ವಾಯು ಪಡೆ ಭಾರತದ ಗಡಿ ಪ್ರವೇಶಿಸಲು ಮುಂದಾಗಿದೆ. ಈ ಹಂತದಲ್ಲಿ ಎಚ್ಚರಿಕೆಯಿಂದ ಇದ್ದ ಭಾರತೀಯ ಸೈನಿಕರು ಪಾಕ್ ನ ಎಫ್16 ಯುದ್ಧ ವಿಮಾನ ಭಾರತದ ವಾಯು ಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ ನೆಲಕ್ಕುರುಳಿಸಿದೆ. ಪರಿಣಾಮ ಉಳಿದ ಪಾಕ್ ವಿಮಾನಗಳು ಮರಳಿ ಗೂಡು ಸೇರಿಕೊಂಡಿವೆ.

Leave a Reply