ಗಡಿಯಲ್ಲಿ ಉದ್ವಿಗ್ನ ವಾತಾವರಣ, ವಿಮಾನ ಹಾರಾಟಗಳು ಬಂದ್!

ಡಿಜಿಟಲ್ ಕನ್ನಡ ಟೀಮ್:

ಭಾರತದ ಮೇಲೆ ದಾಳಿ ನಡೆಸಲು ಯತ್ನಿಸಿದ ಪಾಕಿಸ್ತಾನ ಯುದ್ಧ ವಿಮಾನ ಎಫ್16 ಅನ್ನು ಭಾರತ ಹೊಡೆದು ಹಾಕಿದ ಬೆನ್ನಲ್ಲೇ ಎರಡೂ ರಾಷ್ಟ್ರಗಳ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪರಿಣಾಮ, ಎರಡು ದೇಶಗಳ ಗಡಿಯಲ್ಲಿರುವ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ವರದಿಗಳು ಬಂದಿವೆ.

ಭಾರತದಲ್ಲಿ ಪಾಕ್ ಗಡಿಗೆ ಸಮೀಪವಿರುವ ಜಮ್ಮು, ಲೆಹ್, ಚಂಡೀಗಢ, ಅಮೃತಸರ ಮತ್ತು ಶ್ರೀನಗರದ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಬಂದ್ ಮಾಡಲಾಗಿದೆ. ಪಾಕ್ ನಿಂದ ಸೇನಾ ದಾಳಿ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಸೇನೆ ಗಡಿಯಲ್ಲಿ ಅಲರ್ಟ್ ಘೋಷಣೆ ಮಾಡಿವೆ.

ಈ ಮಧ್ಯೆ ಕಾಶ್ಮೀರದ ಬದ್ಗಾಮ್ ಪ್ರದೇಶದಲ್ಲಿ ಭಾರತೀಯ ಯುದ್ಧ ಜೆಟ್ ನೆಲಕ್ಕುರುಳಿದ್ದು, ಇಬ್ಬರು ಪೈಲೆಟ್ ಸತ್ತಿರುವ ಶಂಕೆ ವ್ಯಕ್ತವಾಗಿದೆ. ಇದು ತಾಂತ್ರಿಕ ದೋಷದಿಂದ ಆಗಿರುವ ಅಪಘಾತ ಎಂದು ಭಾರತ ಹೇಳುತ್ತಿದ್ದಾರೆ, ನಾವು ಭಾರತದ ಎರಡು ಜೆಟ್ ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದಕ್ಕೆ ಸಾಕ್ಷಿಯಾಗಿದೆ.

Leave a Reply