ಪಾಕ್ ಸೆರೆಯಿಂದ ಬಿಡುಗಡೆಯಾಗಲಿದ್ದಾನೆ ಭಾರತದ ವೀರ ಪುತ್ರ ಅಭಿನಂದನ್!

ಡಿಜಿಟಲ್ ಕನ್ನಡ ಟೀಮ್:

ಕೋಟ್ಯಂತರ ಭಾರತೀಯರ ಪ್ರಾರ್ಥನೆ, ಭಾರತದ ರಾಜತಾಂತ್ರಿಕ ಒತ್ತಡ… ಇವೆರಡರ ಪರಿಣಾಮವಾಗಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ ವರ್ತಮಾನ ಶುಕ್ರವಾರ ಬಿಡುಗಡೆಯಾಗಿ ಭಾರತಕ್ಕೆ ಮರಳಲಿದ್ದಾರೆ.

ಬುಧವಾರ ಪಾಕ್ ಯುದ್ಧ ವಿಮಾನ ದಾಳಿಗೆ ಪ್ರತಿಯಾಗಿ ನಡೆದ ಕಾರ್ಯಾಚರಣೆ ವೇಳೆ ಮಿಗ್ 21 ಯುದ್ಧ ವಿಮಾನ ಅಪಘಾತಗೊಂಡ ನಂತರ ಅಭಿನಂದನ್

ಭಾರತದ ಒತ್ತಡಕ್ಕೆ ಕೊನೆಗೂ ಮಣಿದ ಪಾಪಿ ಪಾಕಿಸ್ತಾನ, ತನ್ನ ಸೆರೆಯಲ್ಲಿಟ್ಟುಕೊಂಡಿರುವ ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಮಾರ್ಚ್‌ 1 (ಶುಕ್ರವಾರ) ರಂದು ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್  ಘೋಷಿಸಿದ್ದಾರೆ.

ವಿಂಗ್ ಕಮಾಂಡರ್ ಅವರನ್ನು ಶಾಂತಿಯ ಸೂಚಕವಾಗಿ ನಾಳೆ ಬಿಡುಗಡೆ ಮಾಡುವುದಾಗಿ ಇಮ್ರಾನ್ ಖಾನ್ ಅಲ್ಲಿನ ಸಂಸತ್ತಿನಲ್ಲಿ ಹೇಳಿದ್ದಾರೆ. ನಮ್ಮ ಸೆರೆಯಲ್ಲಿರುವ ಭಾರತದ ಪೈಲಟ್‌ ಅನ್ನು ಬಿಡುಗಡೆ ಮಾಡುವುದಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್ ಅಲ್ಲಿನ ಸಂಸತ್ತಿನಲ್ಲಿ ಘೋಷಿಸಿದ್ದಾರೆ.

ಭಾರತದ ಗಡಿ ಪ್ರವೇಶಿಸಿದ್ದ ಪಾಕ್ನ ಜೆಟ್ ವಿಮಾನವನ್ನು ಭಾರತದ ವಿಮಾನಗಳು ಹೊಡೆದುರುಳಿಸಿದ್ದವು. ಈ ವೇಳೆ ಪಾಕ್ ದಾಳಿಗೆ ಸಿಲುಕಿದ್ದ ಮಿಗ್ 21 ವಿಮಾನವು ಕೆಳಗೆ ಬಿದ್ದಿದ್ದು, ಆ ವೇಳೆ, ಅಲ್ಲಿನ ಸೇನೆ ಅಭಿನಂದನ್‌ರನ್ನು ಬಂಧಿಸಿ, ಫೋಟೋ, ವೀಡಿಯೋ ಉಳ್ಳ ದಾಖಲೆಗಳನ್ನೂ ಬಿಡುಗಡೆ ಮಾಡಿತ್ತು.

ಈ ಹಿನ್ನೆಲೆ, ಐಎಎಫ್‌ನ ಗಾಯಗೊಂಡ ಸಿಬ್ಬಂದಿಯನ್ನು ಪಾಕಿಸ್ತಾನ ಕೆಟ್ಟದಾಗಿ ಪ್ರದರ್ಶನ ಮಾಡುತ್ತಿದೆ ಎಂದು ಭಾರತ ಕಟುವಾಗಿ ಆಕ್ಷೇಪಿಸಿದೆ. ಅಲ್ಲದೆ, ಇದು ಅಂತಾರಾಷ್ಟ್ರೀಯ ಮಾನವ ಕಾನೂನಿನ ನಿಯಮಗಳು ಹಾಗೂ ಜಿನೀವಾ ಕನ್ವೆನ್ಶನ್ ಉಲ್ಲಂಘನೆಯಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತರಾಟೆಗೆ ತೆಗೆದುಕೊಂಡಿದೆ.

ಅಲ್ಲದೆ, ಭಾರತದ ರಕ್ಷಣಾ ಸಿಬ್ಬಂದಿಯನ್ನು ಕಸ್ಟಡಿಯಲ್ಲಿ ಇಟ್ಟುಕೊಂಡಿರುವ ಪಾಕಿಸ್ತಾನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ವಿದೇಶಾಂಗ ಸಚಿವಾಲಯ ಸೂಚನೆ ನೀಡಿತ್ತು. ಜತೆಗೆ, ಅವರು ಸುರಕ್ಷಿತವಾಗಿ ಶೀಘ್ರದಲ್ಲೇ ವಾಪಸ್ ಬರುತ್ತಾರೆಂದು ಭಾರತ ಬಯಸುತ್ತದೆ ಎಂದೂ ಹೇಳಿದ್ದಾರೆ.

ಈ ವಿಚಾರದ ಕುರಿತು ಚರ್ಚೆ ನಡೆಸಲು ಪಾಕ್ ಹೈ ಕಮೀಷನರ್ ಸೈಯದ್ ಹೈದರ್ ಶಾಗೆ ಸಮನ್ಸ್ ನೀಡಿತ್ತು. ಈ ವೇಳೆ ವಿದೇಶಾಂಗ ಸಚಿವಾಲಯ ಈ ಎಚ್ಚರಿಕೆ ನೀಡಿತ್ತು. ಕೊನೆಗೂ ಭಾರತದ ಬಿಗಿ ಕ್ರಮ, ಅಂತಾರಾಷ್ಟ್ರೀಯ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಪಿ ಪಾಕಿಸ್ತಾನ ಅಭಿನಂದನ್‌ರನ್ನು ಬಿಡುಗಡೆ ಮಾಡುವುದಾಗಿ ಇಂದು( ಫೆಬ್ರವರಿ 28,2019)ರಂದು ಘೋಷಿಸಿದೆ.

Leave a Reply