ಕಾಮನ್ ಸೆನ್ಸ್ ಇಲ್ಲದ ಯಡಿಯೂರಪ್ಪ; ಪಾಕ್ ಮೇಲಿನ ದಾಳಿಯಿಂದ 22 ಸೀಟು ಬರ್ತದಂತೆ..!

ಡಿಜಿಟಲ್ ಕನ್ನಡ ಟೀಮ್:

ಭಾರತ ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ಸೃಷ್ಠಿಯಾಗಿದೆ. ಗಡಿಯಲ್ಲಿ ದೇಶದ ಜನ ಭಯಭೀತರಾಗಿದ್ದಾರೆ. ಪಾಕಿಸ್ತಾನ ಸೇನೆಯ ವಶದಲ್ಲಿ ಓರ್ವ ಭಾರತೀಯ ವಾಯುಸೇನಾ ಪೈಲಟ್ ಸಿಲುಕಿದ್ದು, ಅವರನ್ನು ಶೀಘ್ರವೇ ಭಾರತಕ್ಕೆ ವಾಪಸ್ ಕರೆತರುವಂತೆ ಇಡೀ ದೇಶವೇ ಪ್ರಾರ್ಥನೆ ಸಲ್ಲಿಸುತ್ತಿದೆ. ಆ ವಾಯುಸೇನೆಯ ಯೋಧನ ಮೇಲೆ ಪಾಕಿಸ್ಥಾನದಲ್ಲಿ ಹಲ್ಲೆ ನಡೆದಿದ್ದು, ಮುಖದಲ್ಲಿ ರಕ್ತ ಚೆಲ್ಲುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದ್ದು, ಭಾರತೀಯರ ರಕ್ತ ಕುದಿಯುವಂತಾಗಿದೆ. ಆದ್ರೆ ಇದೆಲ್ಲಾ ಆಗ್ತಿರೋದ್ರಿಂದ ಜನರ ಮನಸ್ಸು ಭಾರತೀಯ ಜನತಾ ಪಾರ್ಟಿಯ ಪರವಾಗಿದ್ದು, ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗಳಿಸಲು ಸಹಕಾರಿ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ.

ಲೋಕಸಭೆಯಲ್ಲಿ 22 ಸ್ಥಾನ ಗೆಲ್ಲುವ ತನಕ ಮನೆಗೆ ಮನೆಗೆ ವಾಪಸ್ ಆಗೋದಿಲ್ಲ ಎನ್ಮುವ ಶಪಥ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ನೆಲೆ ನಾಶ ಮಾಡಿದ ಬಳಿಕ ದೇಶದಲ್ಲಿ ವಾತಾವರಣ ಬಿಜೆಪಿ ಪರವಾಗಿದೆ. ಸೇನಾ ಕಾರ್ಯಾಚರಣೆ ಬಳಿಕ ಮೋದಿ ಪರ ಅಲೆ ಎದ್ದಿದೆ. ಯುವಕರು ಎದ್ದು ಕುಣಿಯುತ್ತಿದ್ದಾರೆ. ಇವೆಲ್ಲದರ ಪರಿಣಾಮ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಸೈನಿಕರ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರೋದು ನಾಚಿಕೆಗೇಡಿನ ವಿಚಾರವೇ ಸರಿ ಎನ್ನುವ ಆಕ್ರೋಶ ಕೇಳಿಬಂದಿದೆ.

ಮೋದಿ‌ ಕೆಲಸವನ್ನು ಸ್ವತಃ ವಿರೋಧ ಪಕ್ಷದ ನಾಯಕರೇ ಸುಮ್ಮನೆ ಗಮನಿಸುತ್ತಿದ್ದಾರೆ. ಮೋದಿಯನ್ನು ವೈಯಕ್ತಿಕವಾಗಿ ದೂಷಣೆ ಮಾಡುವ ಜನರೂ ಕೂಡ ದೇಶದ ವಿಚಾರಸಲ್ಲಿ ಮೋದಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಪ್ರಧಾನಿಯಾಗಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡಿದರು ಎಂದರೆ ಜನರೇ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಮೋದಿ ಮಾಡಿದ ಈ ಕೆಲಸ ಜನರಿಗೆ ಇಷ್ಟವಾಗದಿದ್ದರೆ ಮೋದಿಯನ್ನು ಸೋಲಿಸ್ತಾರೆ. ಅದು ಜನರ ವಿವೇಚನೆಗೆ ಬಿಟ್ಟ ವಿಚಾರ. ಆದ್ರೆ ಬಿಎಸ್​ ಯಡಿಯೂರಪ್ಪ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಏರ್ ಅಟ್ಯಾಕ್ ಮಾಡಿದ್ದು, ಭಾರತೀಯ ಜನತಾ ಪಾರ್ಟಿ ಗೆಲುವಿಗೆ ಸಹಕಾರಿ ಎಂದು ಹೇಳಿರೋದನ್ನು ನೋಡಿದ್ರೆ, ದೇಶದ ವಿಚಾರದಲ್ಲಿ ಬಿಜೆಪಿ ಹಾಗೂ ಬಿಎಸ್‌ವೈ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡ್ತಿದ್ಯಾ ಅನ್ನೋ ಅನುಮಾನಗಳು ಸತ್ಯ ಎನಿಸುತ್ತವೆ.

Leave a Reply