ಸಚಿವ ಡಿಕೆಶಿಗೆ ಬಿಗ್​ ರಿಲೀಫ್​! ಐಟಿ ಪ್ರಕರಣದ ಮೂರು ಆರೋಪ ರದ್ದುಗೊಳಿಸಿದ ಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ತೆರಿಗೆ ಇಲಾಖೆ ದಾಳಿ ಪ್ರಕರಣದಲ್ಲಿ ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಅವರ ಮೇಲಿದ್ದ ಸಾಕ್ಷ್ಯ ನಾಶ ಸೇರಿದಂತೆ ಇನ್ನಿತರ ಆರೋಪಗಳನ್ನು ಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯದ ಈ ತೀರ್ಪು, ಸಚಿವರಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ.

ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಡಿಕೆಶಿ ಅವರ ವಿರುದ್ಧ ಸಾಕ್ಷ್ಯನಾಶ, ತಪ್ಪು ಮಾಹಿತಿ ನೀಡಿದ ಹಾಗೂ ಚೀಟಿ ಹರಿದ ಆರೋಪ ಸೇರಿದಂತೆ ನಾಲ್ಕು ಆರೋಪಗಳನ್ನು ಮಾಡಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿ ಇಂದು ಕಾಯ್ದಿರಿಸಿದ ತೀರ್ಪು ಓದಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಸಚಿವರನ್ನು ಮೂರು ಪ್ರಕರಣಗಳಲ್ಲಿ ಆರೋಪ ಮುಕ್ತಗೊಳಿಸಿದ್ದಾರೆ. ಆದರೆ, ಡಿಕೆಶಿ ಅವರ ವಿರುದ್ಧದ ಹವಾಲ ಆರೋಪ ಪ್ರಕರಣ ಹೈ ಕೋರ್ಟ್​ನಲ್ಲಿರುವುದರಿಂದ ಈ ಕುರಿತು ಯಾವುದೇ ತೀರ್ಪು ನೀಡಿಲ್ಲ.

Leave a Reply