ಭಾರತ-ಪಾಕ್ ಬಿಕ್ಕಟ್ಟಿಗೆ ರಾಜತಾಂತ್ರಿಕ ಮದ್ದು!

ಡಿಜಿಟಲ್ ಕನ್ನಡ ಟೀಮ್:

ಪಾಕ್​ ಹಾಗೂ ಭಾರತದ ನಡುವೆ ಏರ್ಪಟ್ಟಿದ್ದ ಯುದ್ಧದ ಕಾರ್ಮೋಡ ತಣ್ಣಗಾಗುವ ಲಕ್ಷಣ ಗೋಚರಿಸಿದೆ. ನಿನ್ನೆ ಸಂಜೆ ಪಾಕ್​ ಸಂಸತ್​ನಲ್ಲಿ ಪಾಕ್​ ಪ್ರಧಾನಿ ಇಮ್ರಾನ್​​ ಖಾನ್​ ಹೇಳಿಕೆ ಎಲ್ಲವನ್ನು ಸರಿ ದಾರಿಗೆ ಬರುವ ಸೂಚನೆ ನೀಡಿದೆ.

ನಾವು ಶಾಂತಿಯನ್ನು ಬಯಸುವ ಕಾರಣಕ್ಕೆ ಭಾರತದ ಪೈಲಟ್​ ಅಭಿನಂದನ್​ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ರು. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಿಹಿ ಸುದ್ದಿ ಬರುತ್ತೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದಿಂದ ಈ ಮಾಹಿತಿ ಹೊರ ಬಿದ್ದಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವ ಎಷ್ಟಿದೆ ಎಂಬುದಕ್ಕೆ ಸಾಕ್ಷಿ.

ಈ ಮಧ್ಯೆ ಅಮೆರಿಕ ಹಾಗೂ ಪಾಕಿಸ್ತಾನದಲ್ಲಿ ಈ ರೀತಿ ಬೆಳವಣಿಗೆಗಳು ಹೊರಬಂದ ಹಿನ್ನೆಲೆಯಲ್ಲಿ 5 ಗಂಟೆಗೆ ಮಾಧ್ಯಮಗೋಷ್ಠಿ ನಿಗದಿ ಮಾಡಿದ್ದ ಸೇನಾ ಮುಖ್ಯಸ್ಥರು ತಕ್ಷಣ ಸಮಯ ಬದಲಾವಣೆ ಮಾಡಿಕೊಂಡು ರಾತ್ರಿ 7 ಗಂಟೆಗೆ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಅದರಲ್ಲಿ ಪಾಕ್​ ದಾಳಿ ಬಗ್ಗೆ ಮಾಹಿತಿ ನೀಡಿದ್ದು, ಆದರ ಬಣ್ಣ ಬಯಲು ಮಾಡಿದೆ.

ಫೆಬ್ರವರಿ 27ರ ಬೆಳಗ್ಗೆ 10 ಗಂಟೆಗೆ ಪಾಕಿಸ್ತಾನ ಸೇನೆಯ ಯುದ್ಧ ವಿಮಾನಗಳು ಏಕಾಏಕಿ ಭಾರತದತ್ತ ಬರುತ್ತಿದ್ದನ್ನು ನಮ್ಮ ರಡಾರ್​ ಪತ್ತೆ ಮಾಡಿದವರು. ಪಶ್ಚಿಮ ರಜೌರಿ ಭಾಗದ ಅರಣ್ಯದಲ್ಲಿ ಹಾರಾಟ ಮಾಡುತ್ತಿದ್ದನ್ನು ಗಮನಿಸಿದ ಭಾರತೀಯ ವಾಯುಸೇನೆ, ಭಾರತದ ವಾಯು ಪ್ರದೇಶಕ್ಕೆ ಆಗಮಿಸುತ್ತಿದ್ದಂತೆ ನಮ್ಮ ಯುದ್ಧ ವಿಮಾನಗಳಾದ ಮಿಗ್​ 21, ಸುಖೋಯ್ 30 ಎಂ ಕೆಐ, ಮಿರಾಜ್​ 2000 ದಾಳಿ ಮಾಡಿದವು. ಈ ವೇಳೆ ಸೇನಾ ಕ್ಯಾಂಪ್​ ಗುರಿಯಾಗಿಸಿ ದಾಳಿ ಮಾಡಿದ ಪಾಕ್​ ಯುದ್ಧ ವಿಮಾನಗಳು ಸೇನಾ ಕ್ಯಾಂಪ್​ನ ಕಾಂಪೌಂಡ್​ ಬಳಿ ಬಾಂಬ್​ ದಾಳಿ ಮಾಡಿದ್ವು. ಆದ್ರೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಈ ವೇಳೆ ನಮ್ಮ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ಸೇರಿದ F-16 ಯುದ್ಧ ವಿಮಾನವನ್ನು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಹೊಡೆದುರುಳಿಸುವಲ್ಲಿ ಯಶಸ್ವಿಯಾದವು. ನಂತ್ರ ನಾವು ಎಫ್​-16ನಲ್ಲಿ ದಾಳಿ ಮಾಡಿಲ್ಲ ಎಂದ್ರು. ಆದ್ರೆ ನಮ್ಮ ಬಳಿ ಎಫ್​-16 ಯುದ್ಧ ವಿಮಾನದ ಅವಶೇಷಗಳಿವೆ ಎಂಬುದಕ್ಕೆ ಭಾರತೀಯ ಸೇನೆ ಸಾಕ್ಷಿ ಕೊಟ್ಟಿದೆ.

ಭಾರತೀಯ ವಾಯುಪಡೆಯ ಮಿಗ್ – 21 ಯುದ್ಧ ವಿಮಾನವನ್ನು ಪಾಕಿಸ್ತಾನ ವಾಯುಪಡೆಯ F – 16 ಯುದ್ಧ ವಿಮಾನ ಹೊಡೆದು ಉರುಳಿಸಿತು. ಈ ವೇಳೆ F – 16 ಯುದ್ಧ ವಿಮಾನದಲ್ಲಿದ್ದು ಇಬ್ಬರು ಪಾಕ್​ ಪೈಲಟ್​ಗಳು ಯುದ್ಧ ವಿಮಾನದಿಂದ ಕಳಚಿಕೊಂಡು ಪ್ಯಾರಚೂಟ್​ ಬಳಸಿ, ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಸೇಫ್​ ಲ್ಯಾಂಡ್​ ಆಗಿದ್ದಾರೆ. ಇನ್ನು ನಮ್ಮ ಕಮಾಂಡರ್​ ಅಭಿನಂದನ್​ ಕೂಡ ವಿಮಾನದಿಂದ ಕಳಚಿಕೊಂಡು ಪ್ಯಾರಚೂಟ್​ ಬಳಸಿ ಕೆಳಕ್ಕಿಳಿದಾಗ ಪಾಕ್​ ಸೇನೆ ವಶಕ್ಕೆ ಪಡೆದಿದೆ ಎಂದಿದ್ದಾರೆ.

Leave a Reply