ಪಾಕಿಸ್ತಾನದ ಉಗ್ರತ್ವ ಸಮಸ್ಯೆಗೆ ವಿಭಜನೆಯೇ ಮದ್ದು! ಇದು ಸ್ವಾಮಿ ಸೂತ್ರ!

ಡಿಜಿಟಲ್ ಕನ್ನಡ ಟೀಮ್:

ಭಯೋತ್ಪಾದನೆಯನ್ನು ತನ್ನ ಒಡಲಲ್ಲಿ ಬೆಳೆಸುತ್ತಾ ತಾನು ನಾಶವಾಗುವುದಲ್ಲದೆ ನೆರೆ ರಾಷ್ಟ್ರಗಳಿಗೂ ತೊಂದರೆ ನೀಡುತ್ತಿರುವ ಪಾಕಿಸ್ತಾನವನ್ನು ವಿಭಜನೆ ಮಾಡಿದರಷ್ಟೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ… ಇದು ರಾಜ್ಯ ಸಭಾ ಸದಸ್ಯ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ಪಟ್ಟಿರುವ ಸುಬ್ರಮಣಿಯನ್ ಸ್ವಾಮಿ, ‘ಪಾಕಿಸ್ತಾನವನ್ನು 4 ಭಾಗಗಳಾಗಿ ವಿಭಜಿಸುವುದೇ ಸೂಕ್ತ. ಪಾಕಿಗಳಿಗೆ ಆಡಳಿತ ನಡೆಸುವುದು ಹೇಗೆಂದು ತಿಳಿದಿಲ್ಲ ಮಾತ್ರವಲ್ಲದೇ ಅವರು ಬಲೂಚಿಗಳನ್ನು, ಸಿಂಧಿಗಳನ್ನು ಮತ್ತು ಪಾಖ್ತೂನೀಗಳನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಮತ್ತು ಕಳೆದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ಜನರು ದಂಗೆ ಏಳದಿರುವುದು ಪಾಕಿಸ್ಥಾನದವರ ಎದೆ ಒಡೆಯಲು ಕಾರಣವಾಗಿದೆ’ ಎಂದಿದ್ದಾರೆ.

ಪಾಕಿಸ್ತಾನದ ಒಳಭಾಗದಲ್ಲೇ ದೇಶವಿಭಜನೆಯ ಕೂಗು ಬಲವಾಗುತ್ತಿದೆ. ಇದರ ಬೆನ್ನಲ್ಲೇ ಸುಬ್ರಮಹ್ಮಣ್ಯ ಸ್ವಾಮಿ ಈ ಟ್ವೀಟ್ ಮಾಡಿದ್ದಾರೆ.

Leave a Reply