ಕಾಶ್ಮೀರದಲ್ಲಿ ತಿಳಿಯಾಗದ ಉಗ್ರ ಸ್ಥಿತಿ! ಐವರು ಯೋಧರು ಹುತಾತ್ಮ!

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದರೂ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಪರಿಣಾಮ ಶನಿವಾರ ಐವರು ಯೋಧರು ಹುತಾತ್ಮರಾಗಿದ್ದಾರೆ.

ಕುಪ್ವಾರ ಜಿಲ್ಲೆಯ ಬಾಬಾಗುಂದ್ ಪ್ರದೇಶದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಓರ್ವ ಸಿಆರ್ ಪಿಎಫ್ ಅಧಿಕಾರಿ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಇನ್ನು ಐವರು ಯೋಧರು ಗಾಯಗೊಂಡಿದ್ದಾರೆ. ಓರ್ವ ನಾಗರಿಕ ಮೃತಪಟ್ಟಿದ್ದಾರೆ.

ಕಾರ್ಯಾಚರಣೆ ವೇಳೆ ಯೋಧರ ಗುಂಡಿನ ದಾಳಿಗೆ ಉಗ್ರನೊಬ್ಬ ಸತ್ತಿತ್ತು ಈತನ ಜತೆ ಮತ್ತೊಬ್ಬ ಉಗ್ರ ಸತ್ತಿರುವಂತೆ ಬಿದ್ದು ನಟಿಸಿದ್ದಾನೆ. ಈ ವೇಳೆ ಉಗ್ರರನ್ನು ಯೋಧರು ಪರಿಶೀಲಿಸಲು ಮುಂದಾದಾಗ ಓರ್ವ ಉಗ್ರ ದಿಢೀರನೆ ಎದ್ದು ಗುಂಡಿನ ದಾಳಿ ನಡೆಸಿದ್ದಾನೆ. ಈ ಹಂತದಲ್ಲಿ ಯೋಧರು ಮೃತಪಟ್ಟಿದ್ದಾರೆ.

ಇನ್ನು ರಾಜಾರಿ ಹಾಗೂ ಪೂಂಚ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಶೆಲ್ ದಾಳಿ ನಡೆಸಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

Leave a Reply