ನಾನು ಉಗ್ರರನ್ನು ಮುಗಿಸಲು ಪ್ರಯತ್ನಿಸಿದರೆ, ವಿರೋಧ ಪಕ್ಷಗಳು ನನ್ನನ್ನು ಮುಗುಸಲು ಕಾಯುತ್ತಿವೆ: ಮೋದಿ

ಡಿಜಿಟಲ್ ಕನ್ನಡ ಟೀಮ್:

‘ನಾನು ಭಯೋತ್ಪಾದನೆಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದೇನೆ ಆದರೆ ವಿರೋಧಿಗಳು ನನ್ನನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕುತ್ತಿವೆ…’ ಇದು ವಿರೋಧ ಪಕ್ಷಗಳ ಮಹಾಘಟಬಂಧನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ವಾಗ್ದಾಳಿ.

ಬಿಹಾರದ ಪಾಟ್ನಾದಲ್ಲಿ ನ್ಯಾಷನಲ್ ಡೆಮೋಕ್ರಾಟಿಕ್ ಅಲೆಯನ್ಸ್ (ಎನ್ ಡಿಎ) ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದ ಮೋದಿ, ಕಾಂಗ್ರೆಸ್ ಸೇರಿದಂತೆ ರಾಜಕೀಯ ವಿರೋಧಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು ಹೀಗೆ…

‘ಭಯೋತ್ಪಾದಕ ತರಬೇತಿ ಶಿಬಿರದ ಮೇಲಿನ ವಾಯುದಾಳಿ ಬಳಿಕವೂ ಕಾಂಗ್ರೆಸ್ ಮತ್ತಿತರೆ ವಿರೋಧ ಪಕ್ಷದವರು ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನವನ್ನು ಮೆಚ್ಚಿಸಲು ಹೊರಟಿದ್ದಾರೆ.

ವಿರೋಧ ಪಕ್ಷಗಳು ಮೊನ್ನೆ ನಡೆದ ಏರ್ ಸ್ಟ್ರೈಕ್ ನ ಪುರಾವೆಗಳನ್ನು ಕೇಳುತ್ತಿವೆ, ಭಾರತೀಯ ಸೇನೆಯಲ್ಲಿನ ಸೈನಿಕರ ಆತ್ಮಬಲವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ವಿರೋಧ ಪಕ್ಷಗಳು ಶತ್ರುರಾಷ್ಟ್ರಗಳ ಬಲ ಹೆಚ್ಚುವಂತೆ ಮಾಡಲು ಹೊರಟಿದ್ದಾರೆಯೆ?

ಭಾರತೀಯರೆಲ್ಲಾ ಒಂದಾಗಿ ಗಟ್ಟಿ ದನಿಯಲ್ಲಿ ನಮ್ಮ ಯೋಧರಿಗೆ ಸಲಾಂ ಎನ್ನುತ್ತಿರುವಾಗ 21 ವಿರೋಧ ಪಕ್ಷಗಳ ನಾಯಕರು ಅದನ್ನು ಖಂಡಿಸಿ ನಿರ್ಣಯ ಕೈಗೊಳ್ಳಲು ದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ.

ಪುಲ್ವಾಮಾ ದಾಳಿಯ ಬಳಿಕ ಇಡೀ ರಾಷ್ಟ್ರ ಸೈನಿಕರ ಕುಟುಂಬದೊಡನೆ ಇದೆ. ಇದು ನವ ಭಾರತ, ನಾವೀಗ ನಮ್ಮ ಸೈನಿಕರ ಹತ್ಯೆಯಾದರೂ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ.’

Leave a Reply