ಮಸೂದ್ ಅಜರ್ ಸತ್ತಿರೋದು ನಿಜನಾ? ಅಥವಾ ಉಗ್ರನ ರಕ್ಷಣೆಗೆ ಐಎಸ್ಐನ ಸುಳ್ಳಿನ ಕಥೆನಾ?

ಡಿಜಿಟಲ್ ಕನ್ನಡ ಟೀಮ್:

ಜೈಶ್ ಎ ಮೊಹಮದ್ ಸಂಘಟನೆ ಮುಖ್ಯಸ್ಥ ಹಾಗೂ ಪುಲ್ವಾಮ ದಾಳಿ ರೂವಾರಿ ಉಗ್ರ ಮಸೂದ್ ಅಜರ್ ಶ್ವಾಸಕೋಶ ಕ್ಯಾನ್ಸರ್ ನಿಂದ ಸತ್ತಿದ್ದಾನೆ ಎಂಬ ಸುದ್ದಿ ನಿನ್ನೆಯಿಂದ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಆದರೆ, ಈ ಕುರಿತು ಪಾಕಿಸ್ತಾನ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಆದರೆ ಪಾಕ್ ಸರಕಾರದ ನಡೆಗಳು ಈತ ಸತ್ತಿರುವ ವರದಿಗೆ ಪುಷ್ಠಿ ನೀಡುತ್ತಿವೆ.

ವರದಿಗಳ ಪ್ರಕಾರ ಮಸೂದ್ ಅಜರ್ ಮಾರ್ಚ್ 2ರಂದು ಶ್ವಾಸಕೋಶ ಕ್ಯಾನ್ಸರ್ ನಿಂದ ಮಾರ್ಚ್ 2ರಂದು ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಲ್ಲಿ ಸತ್ತಿದ್ದಾನೆ ಎಂದು ಗುಪ್ತಚರ ಇಲಾಖೆಯ ಉನ್ನತ ಮೂಲಗಳು ಹೇಳುತ್ತಿವೆ. ಮತ್ತೆ ಕೆಲವು ಮಸೂದ್ ಅಜರ್ ಭಾರತೀಯವಾಯುಪಡೆ ಫೆ.26ರಂದು ನಡಸಿದ ವಾಯುದಾಳಿ ವೇಳೆ ಮಸೂದ್ ಅಜರ್ ಬಾಲಕೊಟ್ ಶಿಬಿರದಲ್ಲೇ ಮಲಗಿದ್ದ ಎಂದು ಹೇಳುತ್ತಿವೆ. ಈ ದಾಳಿಯಲ್ಲಿ ಮಸೂದ್ ಆಪ್ತ  ಕೊಲೊನೆಲ್ ಸಲೀಮ್ ಕ್ವಾರಿ ಹತನಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ವಾಯುದಾಳಿಯ ಬಗ್ಗೆ ಪಾಕಿಸ್ತಾನ ಒಪ್ಪಿಕೊಂಡ ಬೆನ್ನಲ್ಲೇ ಮಸೂದ್ ಅಜರ್ ಸಾವಿನ ಸುದ್ದಿ ಹೊರಬಂದಿದೆ. ಇನ್ನು ಪಾಕಿಸ್ತಾನ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸುವ ಅಮೆರಿಕ, ಫ್ರಾನ್ಸ್ ಹಾಗೂ ಬ್ರಿಟನ್ ಪ್ರಸ್ತಾವನೆಯನ್ನು ವಿರೋಧಿಸದೇ ಇರಲು ಪಾಕಿಸ್ತಾನ ನಿರ್ಧರಿಸಿದೆ. ಇದು ಕೂಡ ಮಸೂದ್ ಅಜರ್ ಸಾವಿನ ವಿಚಾರವಾಗಿ ತೆಗೆದುಕೊಂಡಿರುವ ನಿರ್ಧಾರವೇ ಎಂಬಅನುಮಾನಕ್ಕೂ ಕಾರಣವಾಗಿದೆ.

ಮತ್ತೊಂದೆಡೆ ಈ ಎಲ್ಲ ಬೆಳವಣಿಗೆಗಳ ಹಿಂದೆ ಉಗ್ರ ಮಸೂದ್ ಅಜರ್ ನ ರಕ್ಷಣೆಯ ಉದ್ದೇಶವಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಪುಲ್ವಾಮ ದಾಳಿ ನಂತರ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚುತ್ತಿದ್ದು, ಮಸೂದ್ ಅಜರ್ ಹಾಗೂ ಜೈಷ್ ಎ ಮೊಹಮದ್ ಸಂಘಟನೆ ವಿರುದ್ಧ ಕ್ರಮದ ಅನಿವಾರ್ಯತೆ ಎದುರಾಗಿದೆ. ಈ ಸಂದರ್ಭದಲ್ಲಿ ಮಸೂದ್ ಅಜರ್ ನನ್ನು ರಕ್ಷಣೆ ಮಾಡಲು ಆತ ಸತ್ತಿದ್ದಾನೆ ಎಂಬ ಸುಳ್ಳು ಕತೆಯನ್ನು ಪಾಕ್ ಗುಪ್ತಚರ ಇಲಾಖೆ ಬಿಟ್ಟಿದೆಯೇ? ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಅಜರ್ ಸಾವಿನ ವರದಿಯನ್ನು ಜೈಷ್ ಸಂಘಟನೆ ಸುಳ್ಳು, ಆತ ಜೀವಂತವಾಗಿದ್ದಾನೆ ಎಂದು ಹೇಳಿಕೊಂಡಿದೆ.

ಅಜರ್ ಸತ್ತಿದ್ದಾನೆ ಎಂದು ಪ್ರಪಂಚಕ್ಕೆ ನಂಬಿಸಿ ಆತನನ್ನು ಸುರಕ್ಷಿತವಾಗಿಡುವುದು ಐಎಸ್ಐನ ಕ್ರಮವಾಗಿದೆ. ಇದರಿಂದ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಆತನ ಮೇಲಿನ ಜಾಗತಿಕ ನಿಷೇಧ ತಪ್ಪಿಸುವುದು ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದನ್ನು ತಪ್ಪಿಸುವ ಉದ್ದೇಶವಿದೆ. ಇದೇ ರೀತಿ ಪಾಕಿಸ್ತಾನ ಒಸಾಮ ಬಿನ್ ಲಾಡೆನ್ ನನ್ನು ಸತ್ತಿದ್ದಾನೆ ಎಂದು ಬಿಂಬಿಸಿ ರಕ್ಷಣೆ ನೀಡಲಾಗಿತ್ತು. ಈಗಲೂ ಅದೇ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನಗಳು ದಟ್ಟವಾಗಿವೆ.

ಒಟ್ಟಿನಲ್ಲಿ ಮಸೂದ್ ಅಜರ್ ನ ಸಾವಿಗೆ ಪೂರಕವಾಗಿ ಎಷ್ಟು ಅಂಶಗಳು ವ್ಯಕ್ತವಾಗುತ್ತಿವೆಯೋ, ಆತನ ರಕ್ಷಣೆಗೆ ಪಾಕ್ ಗುಪ್ತಚರ ದಳ ಐಎಸ್ಐ ರಕ್ಷಣೆ ಮಾಡುವ ಯತ್ನ ಎಂಬುದಕ್ಕೂ ಅಷ್ಟೇ ಅಂಶಗಳು ಗೋಚರಿಸುತ್ತಿವೆ. ಪಾಕಿಸ್ತಾನ ಸರ್ಕಾರ ಈ ಕುರಿತ ಅಧಿಕೃತ ಹೇಳಿಕೆಯನ್ನು ಮಾಡಿ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸಬೇಕಿದೆ.

Leave a Reply