ಅಭಿನಂದನ್ 48 ಗಂಟೆಗಳಲ್ಲಿ ಮರಳಲು ಮೋದಿಯೇ ಕಾರಣ: ಅಮಿತ್ ಶಾ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ವಿರುದ್ಧದ ರಾಜತಾಂತ್ರಿಕ ಗೆಲುವನ್ನು ಬಿಜೆಪಿ ಈಗ ತನ್ನ ಚುನಾವಣೆ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಮುಂಬರುವ ಲೋಕಸಭೆ ಚುನಾವಣೆ ಪ್ರಚಾರ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ‘ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಪಾಕಿಸ್ತಾನ ಸೇನೆಯ ವಶಕ್ಕೆ ಸಿಲುಕಿದ್ದರೂ ಕೇವಲ 48 ಗಂಟೆಗಳಲ್ಲಿ ವಾಪಸ್ಸಾಗಿರುವುದಕ್ಕೆ ಮೋದಿ ಸರ್ಕಾರವೇ ಕಾರಣ’ ಎಂದು ಹೇಳಿದ್ದಾರೆ.

ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ ಹೇಳಿದ್ದಿಷ್ಟು… ‘ಭಾರತದ ದಿಟ್ಟ ಉತ್ತರದಿಂದ ಪಾಕಿಸ್ತಾನ ಕಂಗಾಲಾಗಿ ಕೂತಿದೆ. ಅಲ್ಲದೆ ತೀವ್ರ ಒತ್ತಡಕ್ಕೆ ಸಿಲುಕಿದೆ. ಆದರೆ ಇತ್ತ ಭಾರತದಲ್ಲಿ ರಾಹುಲ್ ಬಾಬಾ ಮತ್ತು ಆತನ ಜತೆಗಾರರು ಭಾರತದ ವಾಯು ದಾಳಿಯನ್ನು ಪ್ರಶ್ನಿಸುತ್ತಲೇ ಇದ್ದಾರೆ. ಪಾಕಿಸ್ತಾನದವರು ನಮ್ಮ ವಿಂಗ್ ಕಮಾಂಡರ್ ನನ್ನು ಸೆರೆ ಹಿಡಿದದ್ದರು. ಆದರೂ ಕೇವಲ 48 ಗಂಟೆಗಳಲ್ಲಿ ಆತ ಭಾರತಕ್ಕೆ ವಾಪಸ್ ಮರಳಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವೇ ಕಾರಣ.’

Leave a Reply