ನನಗೂ ಒಂದು ಅವಕಾಶ ಕೊಡಿ: ಉಮೇಶ್ ಜಾಧವ್ ಮನವಿ

ಡಿಜಿಟಲ್ ಕನ್ನಡ ಟೀಮ್:

ನನಗೆ ಒಂದು ಅವಕಾಶ ನೀಡಿ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ನನ್ನ ಕನಸು… ಇದು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಉಮೇಶ್ ಜಾಧವ್ ಬುಧವಾರ ಕಲಬುರಗಿ ಮತದಾರರಿಗೆ ಮಾಡಿಕೊಂಡ ಮನವಿ.

ಬುಧವಾರ ಇಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಉಮೇಶ್ ಜಾಧವ್ ಅವರಿಗೆ ಕಮಲದ ಶಾಲು ಹೊದಿಸಿ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಜಾಧವ್ ಹೇಳಿದ್ದಿಷ್ಟು… ‘ಬಿಜೆಪಿ ಪಕ್ಷ ನನ್ನನ್ನು ಒಳ್ಳೆಯ ರೀತಿಯಲ್ಲಿ ಬರಮಾಡಿಕೊಂಡಿದೆ. ಬಹಳ ಸಂತೋಷದಿಂದ ಬಿಜೆಪಿ ಸೇರಿದ್ದೇನೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ಅಗತ್ಯವಿದೆ. ನನಗೂ ಒಮ್ಮೆ ಅವಕಾಶ ಮಾಡಿಕೊಡಿ.’

Leave a Reply