ಅಯೋಧ್ಯೆ ವಿಚಾರ ಇತ್ಯರ್ಥಕ್ಕೆ ಸುಪ್ರೀಂ ಸಂಧಾನ ಸೂತ್ರ!

ಡಿಜಿಟಲ್ ಕನ್ನಡ ಟೀಮ್:

ಅಯೋಧ್ಯೆ ರಾಮಜನ್ಮಭೂಮಿ – ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಸಂಧಾನವೇ ಸೂಕ್ತ ಮಾರ್ಗ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಜತೆಗೆ ಸಂಧಾನಕ್ಕಾಗಿ ಸಮಿತಿಯನ್ನು ನೇಮಕ ಮಾಡಿದೆ.

ಕಳೆದ ಮೂರು ದಶಕಗಳಿಂದ ಹಿಂದೂ ಹಾಗೂ ಮುಸಲ್ಮಾನ ಧರ್ಮದ ಭಾವನಾತ್ಮಕ ವಿಚಾರ ಮಾತ್ರವಲ್ಲದೆ ರಾಜಕೀಯ ಅಸ್ತ್ರವಾಗಿಯೂ ಬಿಂಬಿತವಾಗಿದ್ದ ಈ ಪ್ರಕರಣ ಈ ತೀರ್ಪಿನಿಂದ ತಾರ್ಕಿಕ ಅಂತ್ಯ ಕಾಣುವ ಸೂಚನೆ ನೀಡಿದೆ.

ಇನ್ನು ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ತೀರ್ಪಿನ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು.

ಸುಪ್ರೀಂ ಕೋರ್ಟ್ ಸಂಧಾನಕ್ಕಾಗಿ ಮೂವರು ಸದಸ್ಯರ ಸಮಿತಿಯನ್ನೂ ನೇಮಕ ಮಾಡಿ ಆದೇಶ ಹೊರಡಿಸಿದೆ. ಅಂತೆಯೇ ವಾರಗಳೊಳಗೆ ಸಂಧಾನ ಕುರಿತ ವರದಿ ನೀಡುವಂತೆ ಸಂಧಾನ ಸಮಿತಿಗೆ ಸೂಚನೆ ನೀಡಿದೆ. ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಲು ಕಾನೂನಿನ ಯಾವುದೇ ತೊಡಕಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು, 8 ವಾರಗಳಲ್ಲಿ ಮಧ್ಯಸ್ಥಿಕೆ- ರಾಜಿ ಸಂಧಾನದ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶ ನೀಡಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಬ್ರಾಹಿಂ ಖಲೀಫುಲ್ಲಾ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಇವರೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮುಖ್ಯಸ್ಥ ರವಿಶಂಕರ್ ಗುರೂಜಿ ಮತ್ತು ವಕೀಲ ಶ್ರೀರಾಮ್ ಪಂಚು ಅವರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

Leave a Reply