ಡಿಜಿಟಲ್ ಕನ್ನಡ ಟೀಮ್:
ಅಯೋಧ್ಯೆ ರಾಮಜನ್ಮಭೂಮಿ – ಬಾಬ್ರಿ ಮಸೀದಿ ಭೂ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಲು ಸಂಧಾನ ಸಮಿತಿ ನೇಮಿಸಿರುವ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳನ್ನು ಹಾಗೂ ಅಂಶಗಳನ್ನು ಪ್ರಸ್ತಾಪಿಸಿದೆ. ಅವುಗಳೆಂದರೆ…
- ಪ್ರಮುಖವಾಗಿ ಯಾವುದೇ ಕಾರಣಕ್ಕೂ ಸಂಧಾನ ಪ್ರಕ್ರಿಯೆಯನ್ನು ಮಾಧ್ಯಮಗಳು ವರದಿ ಮಾಡಬಾರದು. ಈ ವಿಚಾರವಾಗಿ ಸಂಧಾನಕಾರರು ಎಚ್ಚರದಿಂದಿರಬೇಕು.
- ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಫ್ಎಂ ಖಲೀಫುಲ್ಲ ಅವರ ನೇತೃತ್ವದಲ್ಲಿ ಸಂಧಾನ ಸಮಿತಿ ನೇಮಕ.
- ಅಧ್ಯಾತ್ಮ ಗುರು ರವಿಶಂಕರ್ ಗುರೂಜಿ, ಮಧ್ಯವರ್ತಿಯಾಗಿ ಶ್ರೀರಾಮ್ ಪಂಚು ಸಮಿತಿಯಲ್ಲಿದ್ದಾರೆ.
- ಸಂಧಾನ ಪ್ರಕ್ರಿಯೆಯ ಎಲ್ಲ ಮಾಹಿತಿಗಳೂ ಗೌಪ್ಯವಾಗಿರಬೇಕು. ಈ ಕುರಿತು ಸಂಪೂರ್ಣ ಜವಾಬ್ದಾರಿ ಸಂಧಾನ ಸಮಿತಿಯದ್ದೇ ಆಗಿರುತ್ತದೆ.
- ಸಂಧಾನ ಸಮಿತಿಗೆ ಸಂಧಾನಕ್ಕಾಗಿ ಪೀಠ 8 ವಾರಗಳ ಕಾಲಾವಕಾಶ ನೀಡಿದ್ದು, ಇಂದಿನಿಂದ ಒಂದು ವಾರದೊಳಗೆ ಸಂಧಾನ ಪ್ರಕ್ರಿಯೆ ಆರಂಭಿಸಬೇಕು.
- 4 ವಾರಗಳೊಳಗೆ ಕೋರ್ಟ್ ಸಂಧಾನ ಪ್ರಕ್ರಿಯೆಯ ಪ್ರಗತಿ ವರದಿ ಸಲ್ಲಿಕೆ ಮಾಡಬೇಕು ಮತ್ತು 8 ವಾರಗಳೊಳಗೆ ಇಡೀ ಸಂಧಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
- ವಿವಾದಿತ ಪ್ರದೇಶ ಫೈಜಾಬಾದ್ ನಲ್ಲೇ ಸಂಧಾನ ನಡೆಯಬೇಕು.
- ಸಂಪೂರ್ಣ ಸಂಧಾನ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ದಾಖಲಿಸಿಕೊಳ್ಳಬೇಕು.