ಉಗ್ರ ಮಸೂದ್ ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ಯಾರು? ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಉಗ್ರರ ಮೇಲಿನ ದಾಳಿಯನ್ನು ಕಾಂಗ್ರೆಸ್ ವಿರುದ್ಧದ ಟೀಕೆಗೆ ಬಳಸಿಕೊಳ್ಳುತ್ತಿದ್ದ ಬಿಜೆಪಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಹಾವೇರಿಯಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಭಾಗವಹಿಸಿದ ರಾಹುಲ್​ ಗಾಂಧಿ, ಭಯೋತ್ಪಾದನೆ ವಿಚಾರವನ್ನು ಇಟ್ಟುಕೊಂಡೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ರಾಹುಲ್ ಭಾಷಣದ ಪ್ರಮುಖ ಅಂಶಗಳು ಹೀಗಿವೆ…

 • ಪುಲ್ವಾಮ ದಾಳಿಯ ಸೂತ್ರದಾರ ಜೈಷ್​-ಎ-ಮಹಮ್ಮದ್​ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನನ್ನು ಪಾಕಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದು ನೀವೇ ಅಲ್ಲವೇ?.
 • ನಿಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮಸೂದ್​ ಒಟ್ಟಿಗೆ ಕಂದಹಾರ್​ನಲ್ಲಿರುವ ಪೋಟೋ ಇಂಟರ್​ನೆಟ್​ನಲ್ಲಿ ಸಿಗುತ್ತದೆ. ಮಸೂದ್​ಗೆ ರಕ್ಷಣೆ ಕೊಟ್ಟವರೆ ನೀವು. ನಿಮ್ಮ ಭಾಷಣದಲ್ಲಿ ಯಾಕೆ ಇದನ್ನು ಮಾತನಾಡುತ್ತಿಲ್ಲ?
 • ಕಳೆದ ಐದು ವರ್ಷಗಳಿಂದ ಮೋದಿ ಸರ್ಕಾರ ಅಧಿಕಾರದಲ್ಲಿದೆ, ಅಧಿಕಾರಕ್ಕೆ ಬರುವ ಮುನ್ನ ನೀಡಿದ ಉದ್ಯೋಗ ಭರವಸೆ ಸೇರಿದಂತೆ ಒಂದೂ ಭರವಸೆಯನ್ನು ಕೂಡ ಅವರು ಈಡೇರಿಸಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂದು ಭರವಸೆ ನೀಡಿದ್ದಿರಿ. ವಿದೇಶದಲ್ಲಿರುವ ಕಪ್ಪುಹಣ ತರುತ್ತೀನಿ ಎಂದು ಹೇಳಿದ್ದಿರಿ. ಇವೆಲ್ಲಾ ಪೊಳ್ಳು ಭರವಸೆಗಳು.
 • ಮೋದಿಯಂತೆ ಕಾಂಗ್ರೆಸ್​ ಎಂದಿಗೂ ಮಾತು ತಪ್ಪಿಲ್ಲ. ಚುನಾವಣೆಯಲ್ಲಿ ಹೇಳಿದಂತೆ ಮಾಡಿ ತೋರಿಸಿದ್ದೇವೆ. ಕಾಂಗ್ರೆಸ್​ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈಗಾಗಲೇ ರೈತರ ಬೆಳೆ ಸಾಲಮನ್ನಾ ಮಾಡಿದೆ. ನಾವು ಅಧಿಕಾರಕ್ಕೆ ಬಂದ ಮೂರು ರಾಜ್ಯಗಳಲ್ಲಿ ಕೂಡ ರೈತರ ಸಾಲಮನ್ನಾ ಮಾಡಿ ಹೇಳಿದಂತೆ ಮಾಡಿ ತೋರಿಸಿದ್ದೇವೆ.
 • ದೇಶದ ಪ್ರಧಾನಿಯಾಗಿ ಆರಿಸಬೇಡಿ ದೇಶದ ಕಾವಲುಗಾರನಾಗಿ ಆರಿಸಿ ಎಂದು ಹೇಳಿಕೊಂಡಿದ್ದ ಮೋದಿ ಈಗ ದೊಡ್ಡ ದೊಡ್ಡ ಕಾರ್ಪೊರೇಟ್​ ಕುಳಗಳ ಚೌಕಿದಾರರಾಗಿದ್ದಾರೆ.
 • ಮೋದಿ ನನ್ನನ್ನು ಪ್ರಧಾನಿ ಮಾಡಬೇಡಿ ಚೌಕಿದಾರ್​ ಮಾಡಿ ಎನ್ನುತ್ತಿದ್ದರು. ಭಷ್ಟ್ರಚಾರದ ವಿರುದ್ಧ ಹೋರಾಡುತ್ತೇನೆ ಎಂದು ಎಲ್ಲ ಕಡೆ ಹೇಳುತ್ತಾರೆ. ಇವರೇ ಭಷ್ಟರು. ಕೇವಲ 15 ಜನರ ಅಭಿವೃದ್ಧಿ ರಕ್ಷಕರಾಗಿದ್ದಾರೆ. ಇವರು ದೇಶದ ಚೌಕಿದಾರ ಅಥವಾ ಶ್ರೀಮಂತರ ಚೌಕಿದಾರ ಎಂಬುದು ತಿಳಿಯುತ್ತಿಲ್ಲ.
 • ಸಿಬಿಐ ನಿರ್ದೇಶಕರನ್ನ ಮಧ್ಯರಾತ್ರಿ ತೆಗೆದುಹಾಕುತ್ತಾರೆ. ಸುಪ್ರೀಂಕೋರ್ಟ್​ ಹೇಳಿದರೂ ಕೇಳೋದಿಲ್ಲ.
 • ದೇಶದ ಯುವ ಜನರಿಗೆ 5 ವರ್ಷದಿಂದ ಬರೀ ಭರವಸೆ ಭಾಷಣ ಕೇಳಿಸುತ್ತಿದ್ದೀರಾ. 5 ವರ್ಷದಲ್ಲಿ ಎಷ್ಟು ಜನರಿಗೆ ಉದ್ಯೋಗ ಸೃಷ್ಟಿಸಿದ್ದೀರಾ ಹೇಳಿ. ನಿಮ್ಮ ತೀರ್ಮಾನಗಳಿಂದ ಎಷ್ಟು ಜನ ಬೀದಿಗೆ ಬಂದಿದ್ದಾರೆ. 45 ವರ್ಷದಲ್ಲಿ ಹೆಚ್ಚು ನಿರುದ್ಯೋಗ ಹೆಚ್ಚಾಗಿದ್ದೇ ನಿಮ್ಮ ಕಾಲದಲ್ಲಿ.
 • ಚೀನಾ ಅಧ್ಯಕ್ಷರ ಜೊತೆ ನೀವು ಗುಜರಾತ್​ನಲ್ಲಿ ಉಯ್ಯಾಲೆ ಆಡುವಾಗ, ಚೀನಾ ಸೇನೆ ನಮ್ಮ ದೋಕಲಾಂ ಗಡಿಗೆ ಬಂದು ಠಿಕಾಣಿ ಹೂಡಿತ್ತು ಅದಕ್ಕೆ ನೀವೇನು ಮಾಡಿದ್ದೀರಾ, ಈಗಲೂ ಚೀನಾದವರು ಅಲ್ಲೇ ಇದ್ದಾರೆ.
 • ಸಂಸತ್​ನಲ್ಲಿ ರಫೇಲ್​ ಹಗರಣದ ಬಗ್ಗೆ ನಾಲ್ಕು ಸವಾಲ್​ ಹಾಕಿದ್ದೆ. 1. ಅನಿಲ್​ಗೆ ಯಾಕೆ ರಫೆಲ್​ ಒಪ್ಪಂದ ಕೊಟ್ಟಿರು ಎಂದು 2. ಅದನ್ನು ಇನ್ನು ಕೂಡ ಯಾಕೆ ಅವರು ರೂಪಿಸಿಲ್ಲ 3. 600 ಕೋಟಿ ಒಪ್ಪಂದಕ್ಕೆ 1600 ಕೋಟಿಗೆ ನೀಡಿದ್ದೇಕೆ 4. ಯಾಕೆ ಎಚ್​ಎಎಲ್​ಗೆ ಕೊಡಲಿಲ್ಲ ಎಂದು ಈ ನನ್ನ ಪ್ರಶ್ನೆಗಳಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯ ಮೋದಿಗೆ ಇಲ್ಲ.
 • 2019ರಲ್ಲಿ ಕಾಂಗ್ರೆಸ್​ ಸರ್ಕಾರ ಬಂದ್ರೆ ‘ಬಡವರಿಗೆ ಸಾಮಾನ್ಯ ಕನಿಷ್ಠ ಆದಾಯ ಯೋಜನೆ ತರುತ್ತೇವೆ. ಪ್ರತಿಯೊಬ್ಬ ಬಡವನಿಗೂ ಕನಿಷ್ಠ ಆದಾಯದ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಪ್ರತಿ ತಿಂಗಳು ಬಡವರ ಖಾತೆಗೆ ಆದಾಯ ಖಾತ್ರಿ ಯೋಜನೆಯಡಿ ಹಣ ಹಾಕುತ್ತೇವೆ.
 • ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡುತ್ತೇವೆ. ಕರ್ನಾಟಕದಲ್ಲಿ ಜೆಡಿಎಸ್​ ಜೊತೆ ಒಟ್ಟಾಗಿ ನಿಂತು ನಾವು ಸರ್ಕಾರ ನಡೆಸುತ್ತೇವೆ. ಲೋಕಸಭೆಯಲ್ಲೂ ಮೈತ್ರಿ ಮುಂದುವರೆಸಿ ದೊಡ್ಡ ಗೆಲುವು ಕಾಣುತ್ತೇವೆ.
 • ಜೆಡಿಎಸ್​-ಕಾಂಗ್ರೆಸ್​ ಕಾರ್ಯಕರ್ತರು ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡುತ್ತೇವೆ. ಇಲ್ಲಿರುವ ನಮ್ಮ ಮೈತ್ರಿ ಸರ್ಕಾರ ರೈತರು, ಬಡವರ ಪರವಾದ ಸರ್ಕಾರ.

Leave a Reply