8ಕ್ಕೆ ತೃಪ್ತಿ ಪಟ್ಟು ಕಾಂಗ್ರೆಸ್ ನಂಟಿಗೆ ಜೆಡಿಎಸ್ ಜೈ!?

ಡಿಜಿಟಲ್ ಕನ್ನಡ ಟೀಮ್:

ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆ ದಿನಾಂಕ ಪ್ರಕಟಣೆಗೆ ಕ್ಷಣಗಣನೆ ಲೆಕ್ಕ ಹಾಕಲಾಗುತ್ತಿದೆ. ಈ ಹೊತ್ತಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ದೋಸ್ತಿಗಳ ನಡುವಣ ಸೀಟು ಚೌಕಾಸಿ ಇನ್ನು ಅಂತಿಮವಾಗಿಲ್ಲ. ಆದರೆ ಸದ್ಯದ ಮಟ್ಟಿಗೆ ಜೆಡಿಎಸ್ 8 ಕ್ಷೇತ್ರಗಳಿಗೆ ತೃಪ್ಟಿಪಟ್ಟು, ಕಾಂಗ್ರೆಸ್ ಜತೆಗಿನ ಮೈತ್ರಿಗೆ ಜೈ ಎನ್ನಲು ಲೆಕ್ಕಾಚಾರ ನಡೆಸುತ್ತಿದೆ ಎಂಬ ವಿಶ್ಲೇಷಣೆಗಳು ಬಂದಿವೆ.

ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ದೇಶದಲ್ಲಿ ರಾಜಕೀಯ ವಿದ್ಯಮಾನಗಳು ಚುರುಕಾಗಿವೆ. ಅದೇ ರೀತಿ ರಾಜ್ಯದಲ್ಲೂ ರಾಜಕೀಯ ವಿದ್ಯಮಾನಗಳು ಗರಿಗೆದರುತ್ತಿವೆ. ಅವುಗಳಲ್ಲಿ ಸೀಟು ಹಂಚಿಕೆ ಕೂಡ ಒಂದು.

ದೋಸ್ತಿಗಳ ನಡುವೆ ಸೀಟು ಹಂಚಿಕೆ ಇನ್ನೂ ಸಂಪೂರ್ಣ ಇತ್ಯರ್ಥವಾಗಿಲ್ಲ. ಆದರೆ ಮೊನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿದ ಮಾಜಿ ಪ್ರಧಾನಿ ದೇವೇಗೌಡರು 12 ಸೀಟುಗಳಿಗೆ ಬೇಡಿಕೆ ಇಟ್ಟು 10ರ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಇನ್ನು 2 ಸ್ಥಾನ ಕೆಳಗಿಳಿದು 8ಕ್ಕೆ ತೃಪ್ತಿಪಡುವ ಸೂಚನೆ ಸಿಕ್ಕಿದೆ. ಗೆಲ್ಲುವ ಕ್ಷೇತ್ರಗಳನ್ನು ಮಾತ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ದಳ ಪಡೆ ನಿರ್ಧರಿಸಿದೆ ಎಂಬ ಮಾತು ಕೇಳಿಬಂದಿವೆ.

8:20 ಪಾಲು ಹಂಚಿಕೆ ಬಹುತೇಕ ಅಂತಿಮವಾಗಲಿದ್ದು, ಸದ್ಯದಲ್ಲೇ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ, ಜೆಡಿಎಸ್​ ಪ್ರಭಾವ ಇರುವ ಮಂಡ್ಯ, ಹಾಸನ ಸೇರಿದಂತೆ ಶಿವಮೊಗ್ಗ, ಉಡುಪಿ- ಚಿಕ್ಕಮಗಳೂರು, ಬೆಂಗಳೂರು ಉತ್ತರ, ವಿಜಯಪುರ, ಮೈಸೂರು ಕ್ಷೇತ್ರಗಳ ಜತೆಗೆ ತನ್ನ ಹಿಡಿತದಲ್ಲಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್​ ಜೆಡಿಎಸ್ ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ.

Leave a Reply