ಲೋಕ ಸಮರ ಮುಹೂರ್ತ ಫಿಕ್ಸ್! 7 ಹಂತಗಳಲ್ಲಿ ಮತದಾನ: ಮೇ 23ಕ್ಕೆ ಫಲಿತಾಂಶ

ಡಿಜಿಟಲ್ ಕನ್ನಡ ಟೀಮ್:

ಬಹು ನಿರೀಕ್ಷಿತ ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ ಆಗಿದೆ. ಏಪ್ರಿಲ್ 11ರಿಂದ 7 ಹಂತಗಳಲ್ಲಿ ಈ ಬಾರಿ ಮತದಾನ ನಡೆಸಲಾಗುವುದು. ಮೇ 23ರಂದು ಫಲಿತಾಶ ಪ್ರಕಟಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಭಾನುವಾರ ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ಚುನಾವಣೆಯ ಮಾಹಿತಿ ನೀಡಿದರು. 16ನೇ ಲೋಕಸಭೆ ಅಧಿಕಾರ ಅವಧಿ ಜೂನ್ 3ಕ್ಕೆ ಮುಗಿಯಲಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ನಿಗದಿಪಡಿಲಾಗಿದೆ ಎಂದರು.

ತಕ್ಷಣದಿಂದಲೇ ನೀತಿ ಸಂಹಿತಿ ಜಾರಿ ಮಾಡಲಾಗಿದೆ. ಇದೇ ಮೋದಲ ಬಾರಿಗೆ ಅಭ್ಯರ್ಥಿಗಳ ಭಾವಚಿತ್ರವನ್ನು ಮತಯಂತ್ರಗಳಲ್ಲಿ ಬಳಕೆ ಮಾಡಲಾಗುವುದು. ಈ ಬಾರಿ ಚುನಾವಣೆಯಲ್ಲಿ ಸುಮಾರು 90 ಕೋಟಿ ಜನರು ಮತದಾನ ಮಾಡಲಿದ್ದು, 8.40 ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಸುಗಮ ಹಾಗೂ ಪಾರದರ್ಶಕ ಮತದಾನಕ್ಕಾಗಿ 10 ಲಕ್ಷ ಮತಗಟ್ಟೆಗಳನ್ನು ಹೊಂದಲಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ವಿವಿಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಸೂಕ್ಷ ಮತಗಟ್ಟೆಗಳ ಪ್ರದೇಶದಲ್ಲಿ ಸಿಆರ್ ಪಿಎಫ್ ಸೇನೆಯಿಂದ ಭದ್ರತೆ ನೀಡಲಾಗುವುದು ಎಂದು ಅರೋರಾ ವಿವರಿಸಿದರು.

Leave a Reply