ಕರ್ನಾಟಕದಲ್ಲಿ 2 ಹಂತದ ಮತದಾನ! ಏಪ್ರಿಲ್ 18, 23ರಂದು ಮತದಾನ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಗೆ ದಿನಾಂಕನಿಗದಿಯಾಗಿದ್ದು, ಕರ್ನಾಟಕದಲ್ಲಿ ಎರಡು ಹಂತದ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಏ.18ರಂದು (ಗುರುವಾರ) ಹಾಗೂ ಎರಡನೇ ಹಂತದ ಮತದಾನ ಏ.23ರಂದು (ಮಂಗಳವಾರ) ನಡೆಯಲಿದೆ.

ಮುಖ್ಯ ಚುನಾವಣೆ ಅಧಿಕಾರಿ ಸುನೀಲ್ ಅರೋರಾ ದೆಹಲಿಯ ವಿಜ್ಞಾನ ಭನವದಲ್ಲಿ ಚುನಾವಣೆ ದಿನಾಂಕ ಪ್ರಕಟಿಸಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಾಗೂ ಎರಡನೇ ಹಂತದಲ್ಲಿ ತಲಾ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಯಾವ ಕ್ಷೇತ್ರಗಳು ಮೊದಲ ಹಂತದಲ್ಲಿ ಹಾಗೂ ಯಾವ ಕ್ಷೇತ್ರಗಳು ಎರಡನೇ ಹಂತದ ಮತದಾನಕ್ಕೆ ಒಳಪಡಲಿದೆ ಎಂಬುದು ಇನ್ನಷ್ಟೇ ಹೊರಬರಬೇಕಿದೆ. ರಾಜ್ಯದಲ್ಲಿ ಮತದಾನ ಮಾಡಿದ ಒಂದು ತಿಂಗಳ ನಂತರ ಫಲಿತಾಂಶ ಪ್ರಕಟವಾಗಲಿದೆ.

Leave a Reply