ಮತದಾರನಿಗೆ ಚುನಾವಣೆ ದಿನಾಂಕ ಗೊತ್ತಾದರೂ ಅಭ್ಯರ್ಥಿ ಯಾರು ಎಂಬುದೇ ಗೊತ್ತಿಲ್ಲ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ದಿನಾಂಕ ಭಾನುವಾರ ಪ್ರಕಟವಾಗುವ ಮೂಲಕ ರಾಜಕೀಯ ಸಮರಕ್ಕೆ ಕಹಳೆ ಮೊಳಗಿಸಲಾಗಿದೆ. ಮತದಾರ ತನ್ನ ಅಸ್ತ್ರ ಪ್ರಯೋಗಿಸುವ ದಿನಾಂಕ ಗೊತ್ತಾದರೂ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಯಾರು ಎಂಬುದೇ ಇನ್ನು ತಿಳಿದಿಲ್ಲ.

ಕಾಂಗ್ರೆಸ್ ಜೆಡಿಎಸ್ ದೋಸ್ತಿಗಳು ಇನ್ನು ಸೀಟು ಹಂಚಿಕೆಯನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸೀಟು ಹಂಚಿಕೆ ನಂತರ ಯಾವ ಕ್ಷೇತ್ರ ಯಾರಿಗೆ ಎಂಬುದು ಕೂಡ ನಿರ್ಧಾರವಾಗಬೇಕು. ಅದಾದ ಮೇಲೆ ಆಯಾ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂದು ನಿರ್ಧರಿಸಲಾಗುತ್ತದೆ. ಇನ್ನು ಕ್ಷೇತ್ರ ಹಂಚಿಕೆ ವಿಚಾರವಾಗಿ ಎರಡೂ ಪಕ್ಷಗಳ ಸ್ಥಳೀಯ ನಾಯಕರಲ್ಲಿ ಪೂರ್ಣ ಪ್ರಮಾಣದ ಮನಸ್ಸಿಲ್ಲ.

ಇನ್ನು ಬಿಜೆಪಿ ಕತೆ ನೋಡುವುದಾದರೆ, ಕೆಲವೊಮ್ಮೆ ಸಮೀಕ್ಷೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದರೆ, ಮತ್ತೇ ಕೆಲವೊಮ್ಮೆ ಸಂಸದರ ಮೌಲ್ಯ ಮಾಪನ ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ಮಧ್ಯೆ ಹಾಲಿ ಸಂಸದರಿಗೆ ಟಿಕೆಟ್ ಪಕ್ಕಾ ಅಂತಾ ಇನ್ನು ಕೆಲವು ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಮತದಾರನಿಗೆ ತನ್ನ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ಇದುವರೆಗೂ ಖಚಿತ ಮಾಹಿತಿ ಇಲ್ಲದಂತಾಗಿದೆ.

ಎಲ್ಲೆಲ್ಲಿ ಯಾವಾಗ ಮತದಾನ?

ಏಪ್ರಿಲ್ 18:
ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಿತ್ರದುರ್ಗ.

ಏಪ್ರಿಲ್ 23:
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ.

Leave a Reply