ಕೆಜಿಎಫ್ ನಲ್ಲಿ ರಾಕಿ ಭಾಯ್ 2ನೇ ಅಧ್ಯಾಯಕ್ಕೆ ಮುಹೂರ್ತ!

ಡಿಜಿಟಲ್ ಕನ್ನಡ ಟೀಮ್:

ವಿಶ್ವಮಟ್ಟದಲ್ಲಿ ಹವಾ ಸೃಷ್ಟಿಸಿದ್ದ ಕನ್ನಡ ಸಿನಿಮಾ ಕೆಜಿಎಫ್ ನ ಎರಡನೇ ಭಾಗದ ಚಿತ್ರೀಕರಣ ಬುಧವಾರ ಆರಂಭವಾಗಿದೆ.

ವಿಜಯನಗರದ ಕೋದಂಡರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಅದರೊಂದಿಗೆ ಭಾರತ ಚಿತ್ರರಂಗ ಎದುರು ನೋಡುತ್ತಿರುವ ಕೆಜಿಎಫ್ 2 ಚಿತ್ರದ ನಿರ್ಮಾಣ ಆರಂಭವಾಗಿದೆ.

ಮೊದಲ ಭಾಗದ ಚಿತ್ರ ಪಂಚ ಭಾಷೆಗಳಲ್ಲಿ150 ಕೋಟಿಗೂ ಹೆಚ್ಚು ಹಣ ಗಳಿಸಿದ್ದು ಚಂದನವನದಲ್ಲಿ ಹೊಸ ದಾಖಲೆ ಬರೆದಿದೆ. ಇನ್ನು ರಾಜ್ಯ ಮಾತ್ರವಲ್ಲದೇ ದೇಶ ಹಾಗೂ ವಿದೇಶಗಳಲ್ಲೂ ಈ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಹೀಗಾಗಿ ಕೆಜಿಎಫ್ 2 ಮೇಲೆ ನಿರೀಕ್ಷೆ ಹೆಚ್ಚಿದೆ.

ಎರಡನೇ ಭಾಗದಲ್ಲಿ ಅಧೀರನ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅಭಿನಯಿಸಲಿರುವುದು ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ.

ಮುಹೂರ್ತದ ಫೋಟೋಗಳು ಇಲ್ಲಿವೆ…

Leave a Reply