ಕೆಜಿಎಫ್ ದಾಖಲೆ ಮುರಿಯುವ ಸನಿಹದಲ್ಲಿದ್ದಾನೆ ಯಜಮಾನ!

ಡಿಜಿಟಲ್ ಕನ್ನಡ ಟೀಮ್:

ಕೆಜಿಎಫ್ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆ ಮುರಿದು ಹೊಸ ದಾಖಲೆಗಳನ್ನು ಬರೆದ ಚಿತ್ರ. ಆದರೆ ಈ ಚಿತ್ರ ಮಾಡಿದ ಒಂದು ದಾಖಲೆಯನ್ನು ಶೀಘ್ರದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಮುರಿಯುವ ಸನಿಹದಲ್ಲಿದೆ.

ಹೌದು, ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾದ ಕೆಜಿಎಫ್ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ 18,644,086 ನಷ್ಟು ವೀಕ್ಷಣೆಯಾಗಿತ್ತು. ಆದರೆ ದರ್ಶನ್ ಅವರ ಯಜಮಾನ ಈಗಾಗಲೇ 18,487,163 ವೀಕ್ಷಣೆಯಾಗಿದ್ದು, ಕೆಜಿಎಫ್ ದಾಖಲೆ ಹಿಂದಿಕ್ಕುವ ಸಾಧ್ಯತೆ ಇದೆ.

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ನಡುವೆ ಪ್ರತಿಷ್ಠೆಯ ಸಮರಕ್ಕಿಂತ ಈ ರೀತಿ ಯಶಸ್ಸಿನ ವಿಚಾರದಲ್ಲಿ ಆರೋಗ್ಯಕರ ಸ್ಪರ್ಧೆ ನಡೆಯುತ್ತಿರುವುದು ಚಂದನವನದ ಪಾಲಿಗೆ ಉತ್ತಮ ಬೆಳವಣಿಗೆ ಆಗಿದೆ.

Leave a Reply