ನ್ಯೂಜಿಲೆಂಡ್ ಮಸೀದಿ ಶೂಟೌಟ್: ಅಪಾಯದಿಂದ ಪಾರಾದ ಬಾಂಗ್ಲಾ ಕ್ರಿಕೆಟಿಗರು

ಡಿಜಿಟಲ್ ಕನ್ನಡ ಟೀಮ್:

ನ್ಯೂಜಿಲೆಂಡಿನ ಮಸೀದಿಯಲ್ಲಿ ನಡೆದ ಶೂಟೌಟ್ ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು ಸ್ವಲ್ಪ ಅಂತರದಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೆಲ್ಲಿಂಗ್ಟನ್ ನ ಹ್ಯಾಗ್ಲೆ ಪಾರ್ಕ್​ ಸಮೀಪ ಮಸೀದಿಯಲ್ಲಿ ಈ ಶೂಟೌಟ್ ನಡೆದಿದೆ. ಶಸ್ತ್ರಸಜ್ಜಿತ ದುಷ್ಕರ್ಮಿ ಸ್ವಯಂ ಚಾಲಿತ ಬಂದೂಕು ಹಿಡಿದು ದಾಳಿ ಮಾಡಿದ್ದು, ಬಾಂಗ್ಲಾ ಕ್ರಿಕೆಟಿಗರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವರದಿಗಳು ಬಂದಿವೆ.

ಬಾಂಗ್ಲಾ ಕ್ರಿಕೆಟ್​ ಆಟಗಾರರು ಹ್ಯಾಗ್ಲೆ ಪಾರ್ಕ್​ ಸಮೀಪ ಇದ್ದ ಮಸೀದಿ ಯಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳಿದ್ದಾಗ ಈ ದಾಳಿ ನಡೆದಿದೆ. ದಾಳಿ ನಡೆಯುತ್ತಿದ್ಡಂತೆ ಬಾಂಗ್ಲಾ ಆಟಗಾರರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ ಎಂದು ಬಾಂಗ್ಲಾದೇಶದ ಪತ್ರಕರ್ತ ಮೊಹ್ಮದ್​ ಇಸ್ಲಾಮ್​ ಟ್ವೀಟ್ ಮಾಡಿದ್ದಾರೆ.

ಈ ದಾಳಿಗೆ ಸಂಬಂಧಿಸಿದಂತೆ ಪೊಲೀಸ್​ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕ್ರಿಕೆಟ್​ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply