ಐಎಸ್ಎಲ್: ಬಿಎಫ್ ಸಿ ಚಾಂಪಿಯನ್, ಈ ಸಲ ಕಪ್ ನಮ್ದೇ!

ಡಿಜಿಟಲ್ ಕನ್ನಡ ಟೀಮ್:

ಹೆಚ್ಚುವರಿ ಸಮಯದಲ್ಲಿ ರಾಹುಲ್ ಭೆಕೆ ಅವರ ಆಕರ್ಷಕ ಹೆಡ್ಡರ್ ಗೋಲಿನ ನೆರವಿನೊಂದಿಗೆ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಭಾನುವಾರ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಿಎಫ್ ಸಿ 1-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಅದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಪ್ರೊ ಕಬಡ್ಡಿ, ಪ್ರೊ ಬ್ಯಾಡ್ಮಿಂಟನ್ ಲೀಗ್ ನಂತರ ಐಎಸ್ ಎಲ್ ಟೂರ್ನಿಯಲ್ಲಿ ಬೆಂಗಳೂರು ಫ್ರಾಂಚೈಸಿ ತಂಡಗಳು ಪ್ರಶಸ್ತಿ ಗೆದ್ದಿದ್ದು, ಅಭಿಮಾನಿಗಳ ‘ಈ ಸಲ ಕಪ್ ನಮ್ದೇ’ ಅಭಿಯಾನ ಯಶಸ್ವಿಯಾಗಿದೆ.

ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಹೆಚ್ಚು ಅಂಕಗಳನ್ನು ಸಂಪಾದಿಸಿ ಅಗ್ರ ಸ್ಥಾನದಲ್ಲಿದ್ದ ಬಿಎಫ್ ಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಅದರೊಂದಿಗೆ ಐಎಸ್ ಎಲ್ ಇತಿಹಾಸದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Leave a Reply