ಮಂಡ್ಯ ಕಾಂಗ್ರೆಸಿಗರ ಒಳ ಏಟಿಗೆ ಪ್ರತಿಯಾಗಿ ಗೌಡರ ಮಾಸ್ಟರ್ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಹಾಗೂ ಹಾಸನ ಜೆಡಿಎಸ್​ ಭದ್ರಕೋಟೆಯಾಗಿದ್ದು, ಸುಲಭದ ತುತ್ತು ಎಂದುಕೊಂಡಿದ್ದ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್​.ಡಿ ದೇವೇಗೌಡ, ಇಬ್ಬರು ಮೊಮ್ಮಕ್ಕಳನ್ನು ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದ್ರೆ ಮಂಡ್ಯದಲ್ಲಿ ಎದುರಾದ ಗಂಡಾಂತರಕ್ಕೆ ಕಕ್ಕಾಬಿಕ್ಕಿಯಾದ ತೆನೆಹೊತ್ತ ರೈತ ಮಹಿಳೆ ಮುಂದೇನು ಮಾಡುವುದು ಅನ್ನೋ ಚಿಂತೆಯಲ್ಲಿ ಮುಳುಗಿದ್ರು. ಆದ್ರೆ ನಿನ್ನೆ ಖಾಸಗಿ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಭರ್ಜರಿ ರಣತಂತ್ರ ಪ್ರಯೋಗಿಸಿದ್ದಾರೆ.

ಹೌದು, ಮಂಡ್ಯದಲ್ಲಿ ಮೊಮ್ಮಗನ ಪರ ರಾಹುಲ್ ಗಾಂಧಿ ಅವರಿಂದಲೇ ಪ್ರಚಾರ ಮಾಡಿಸಿದರೆ, ಆಗ ಕಾಂಗ್ರೆಸ್ ನಲ್ಲಿ ಇದ್ದುಕೊಂಡು ನಿಖಿಲ್ ವಿರುದ್ಧ ಕೆಲಸ ಮಾಡುವವರ ಕೈ ಕಟ್ಟಿ ಹಾಕಿದಂತಾಗಲಿದೆ. ಗೌಡರ ಈ ತಂತ್ರಕ್ಕೆ ಸೇರಿದಂತೆ ಕಾಂಗ್ರೆಸ್ ನಾಯಕರು ಹುಬ್ಬೇರಿಸಿದ್ದಾರೆ.

ಮಂಡ್ಯ ಹಾಗೂ ಹಾಸನದಲ್ಲಿ ಸಿದ್ದರಾಮಯ್ಯ ಅಣತಿಯಂತೆಯೇ ಜೆಡಿಎಸ್​ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿ ಮಾಡಲಾಗ್ತಿದೆ. ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆಯಲ್ಲಿ ಸೋಲುಣಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ತನ್ನ ಶಿಷ್ಯರನ್ನೇ ಬಳಸಿಕೊಳ್ಳಲಾಗ್ತಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ದೇವೇಗೌಡರು ದಾಳ ಉರುಳಿಸಿದ್ದು, ಈ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಯಿದೆ.

ಕಾಂಗ್ರೆಸ್​ ಕಾರ್ಯಕರ್ತರು ಹಿಂಬದಿಯಲ್ಲಿ ಸುಮಲತಾ ಅವರನ್ನು ಬೆಂಬಲಿಸಿದ್ರೆ, ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯಗೆ ತೀವ್ರ ಮಖಭಂಗವಾಗಲಿದೆ​. ಜೆಡಿಎಸ್‌ಗೆ ಕಾಂಗ್ರೆಸ್ ಒಳ ಏಟು ಕೊಡ್ತಿದೆ ಅನ್ನೋದು ಸದ್ಯದ ಮಾಹಿತಿ. ಈ ಕಾರಣಕ್ಕಾಗಿಯೇ ಮಂಡ್ಯದಲ್ಲಿ ರಾಹುಲ್ ಗಾಂಧಿ ಕೈಯ್ಯಲ್ಲಿ ಪ್ರಚಾರ ಮಾಡಿಸುವ ದಾಳವನ್ನು ಗೌಡರು ಉರುಳಿಸಿದ್ದಾರೆ.

ರಾಹುಲ್ ಗಾಂಧಿಯೇ ಪ್ರಚಾರ ಮಾಡಿದರೂ ಕಾಂಗ್ರೆಸ್ ನಾಯಕರು ವಿರೋಧಿ ಕೆಲಸ ಮಾಡಿದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ನಾಯಕರ ಸಪೋರ್ಟ್ ಸುಮಲತಾಗೆ ಸಿಗಬಾರದು ಅನಿವಾರ್ಯವಾಗಿ ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸಬೇಕು ಅನ್ನೋ ಕಾರಣಕ್ಕೆ ಮಾರ್ಚ್ 31ಕ್ಕೆ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಮೈಸೂರು ಬೆಂಗಳೂರು ಮಾರ್ಗದಲ್ಲಿ ಅನ್ನೋದು ಖಚಿತ. ಆದ್ರೆ ಸ್ಥಳ ಇನ್ನಷ್ಟೇ ಫೈನಲ್ ಆಗಬೇಕಿದೆ. ಗೌಡರ ತಂತ್ರ ಪರಿಣಾಮ ಬೀರಿದರೆ ಈ ಸಮಾವೇಶ ಮಂಡ್ಯದಲ್ಲೇ ಆಗಲಿದೆ.

Leave a Reply