ನೀರವ್ ಮೋದಿ ಅರೆಸ್ಟ್! ಭಾರತಕ್ಕೆ ಕರೆ ತಂದರೆ ಮೋದಿಗೆ ಭರ್ಜರಿ ಮುನ್ನಡೆ ಪಕ್ಕಾ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಲಾಗುತ್ತಿದ್ದ ಟೀಕೆಗಳು ಒಂದೊಂದಾಗಿ ಠುಸ್ ಆಗುವ ಬೆಳವಣಿಗೆಗಳು ನಡೆಯುತ್ತಿವೆ.

ಹೌದು, ಉದ್ದೇಶಿತ ಸುಸ್ಥಿದಾರ ಕಳಂಕ ಹೊತ್ತಿರುವ ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ರವಾನೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಈಗ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸದೇ ದೇಶ ಬಿಟ್ಟು ಓಡಿಹೋಗಿದ್ದ ವಜ್ರದ ಉದ್ಯಮಿ ನೀರವ್​ ಮೋದಿಯನ್ನು ಲಂಡನ್​ನಲ್ಲಿ ಬಂಧಿಸಲಾಗಿದೆ.

ನೀರವ್ ಬಂಧನದ ಬೆನ್ನಲ್ಲೇ ಭಾರತೀಯ ಅಧಿಕಾರಿಗಳು ಆತನ ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಸಿದ್ಧತೆ ಆರಂಭಿಸಿದ್ದಾರೆ. ನೀರವ್​ ಮೋದಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ 13 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ತಲೆತಪ್ಪಿಸಿಕೊಂಡಿದ್ದರು.

ವಿಜಯ್ ಮಲ್ಯ ದೇಶ ಬಿಟ್ಟ ನಂತರ ನೀರವ್ ಸಾಲ ತೀರಿಸದೇ ಪರಾರಿಯಾದಾಗ ವಿರೋಧ ಪಕ್ಷಗಳು ಪ್ರಧಾನಿ ಚೌಕಿದಾರ್ (ಕಾವಲುಗಾರ) ಅಲ್ಲ, ಚೋರ್ (ಕಳ್ಳ). ಅವರು ಕೇವಲ ಉದ್ಯಮಿಗಳ ಚೌಕಿದಾರ್ ಎಂದು ಟೀಕೆ ಮಾಡಲಾಗುತ್ತಿತ್ತು.

ಚುನಾವಣೆ ಸಮೀಪೀಸುತ್ತಿರುವ ಹೊತ್ತಲ್ಲೇ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಚೌಕಿದಾರ್ ಅಭಿಯಾನ ಆರಂಭಿಸಿದೆ. ಈ ಸಂದರ್ಭದಲ್ಲಿ ನೀರವ್ ಮೋದಿ ಬಂಧನ ಬಿಜೆಪಿಯ ಚೌಕಿದಾರ್ ಅಭಿಯಾನಕ್ಕೆ ಭರ್ಜರಿ ಮುನ್ನಡೆ ತಂದುಕೊಡಲಿದೆ. ಒಂದು ವೇಳೆ ಭಾರತ ರಾಜತಾಂತ್ರಿಕ ಪ್ರಭಾವ ಬಳಸಿ ನೀರವ್ ನನ್ನು ಭಾರತಕ್ಕೆ ಕರೆ ತಂದಿದ್ದೆ ಆದರೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಟ್ರಂಪ್ ಕಾರ್ಡ್ ಆಗುವುದರಲ್ಲಿ ಅನುಮಾನವೇ ಇಲ್ಲ.

Leave a Reply