ಲೋಕ ಸಮರ: ಬಿಜೆಪಿ ಅಭ್ಯರ್ಥಿ ಮೊದಲ ಪಟ್ಟಿ ಬಿಡುಗಡೆ

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಪ್ರಮುಖ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಅಧ್ಯಕ್ಷ ಜೆ.ಪಿ. ನಡ್ಡಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯದ ಬಹುತೇಕ ಎಲ್ಲ ಹಾಲಿ ಸಂಸದರಿಗೆ ಟಿಕೆಟ್‌ ಘೋಷಿಸಲಾಗಿದೆ. ಕೊಪ್ಪಳ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಯಚೂರು, ಚಿಕ್ಕೋಡಿ ಮತ್ತು ಮಂಡ್ಯ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ.

ಮಾರ್ಚ್‌ 16, 18, 19ರಂದು ಸಭೆ ನಡೆಸಿದ ಬಿಜೆಪಿ ಚುನಾವಣಾ ಸಮಿತಿ ಮೊದಲ ಹಂತದಲ್ಲಿ ಒಟ್ಟು 182 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ರಾಜ್ಯದಲ್ಲಿ ಇತ್ತೀಚೆಗೆ ಪಕ್ಷ ಸೇರಿದ ಹಾಸನದ ಎ.ಮಂಜು, ಕಲಬುರಗಿಯ ಉಮೇಶ್ ಜಾಧವ್ ಅವರಿಗೂ ಟಿಕೆಟ್ ನೀಡಲಾಗಿದೆ.

ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೀಗಿದೆ….

  • ಬೆಳಗಾವಿ: ಸುರೇಶ್‌ ಅಂಗಡಿ
  • ಬಾಗಲಕೋಟೆ: ಪಿಸಿ. ಗದ್ದಿಗೌಡರ್
  • ವಿಜಯಪುರ: ರಮೇಶ್‌ ಜಿಗಜಿಣಗಿ
  • ಕಲಬುರಗಿ: ಡಾ. ಉಮೇಶ್‌ ಜಾಧವ್‌
  • ಬೀದರ್: ಭಗವಂತ ಖೂಬಾ
  • ಬಳ್ಳಾರಿ: ದೇವೇಂದ್ರಪ್ಪ
  • ಹಾವೇರಿ: ಶಿವಕುಮಾರ್‌ ಉದಾಸಿ
  • ಧಾರವಾಡ: ಪ್ರಹ್ಲಾದ್‌ ಜೋಷಿ
  • ಉತ್ತರ ಕನ್ನಡ: ಅನಂತಕುಮಾರ ಹೆಗಡೆ
  • ದಾವಣಗೆರೆ: ಜಿ.ಎಂ. ಸಿದ್ದೇಶ್ವರ
  • ಶಿವಮೊಗ್ಗ: ಬಿ.ವೈ. ರಾಘವೇಂದ್ರ
  • ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
  • ಹಾಸನ: ಎ. ಮಂಜು
  • ದಕ್ಷಿಣ ಕನ್ನಡ: ನಳಿನ್‌ಕುಮಾರ್ ಕಟೀಲ್‌
  • ಚಿತ್ರದುರ್ಗ: ಎ.ನಾರಾಯಣಸ್ವಾಮಿ
  • ತುಮಕೂರು: ಜಿ.ಎಸ್‌. ಬಸವರಾಜ್‌
  • ಮೈಸೂರು: ಪ್ರತಾಪ್‌ ಸಿಂಹ
  • ಚಾಮರಾಜನಗರ: ವಿ. ಶ್ರೀನಿವಾಸ ಪ್ರಸಾದ್‌
  • ಬೆಂಗಳೂರು ಉತ್ತರ: ಡಿವಿ ಸದಾನಂದ ಗೌಡ
  • ಬೆಂಗಳೂರು ಸೆಂಟ್ರಲ್‌: ಪಿಸಿ. ಮೋಹನ್‌
  • ಚಿಕ್ಕಬಳ್ಳಾಪುರ: ಬಿ.ಎನ್‌. ಬಚ್ಚೇಗೌಡ

ಇನ್ನು ರಾಷ್ಟ್ರ ಮಟ್ಟದ ಪಟ್ಟಿ ನೋಡುವುದಾದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಾರಾಣಸಿಯಿಂದ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಗಾಂಧಿನಗರದಿಂದ, ಗೃಹ ಸಚಿವ ರಾಜನಾಥ್‌ ಸಿಂಗ್‌ ಲಖನೌದಿಂದ ಹಾಗೂ ನಾಗಪುರದಿಂದ ನಿತಿನ್‌ ಗಡ್ಕರಿ ಸ್ಪರ್ಧಿಸಲಿದ್ದಾರೆ. ಇನ್ನು ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಮೃತಿ ಇರಾನಿ ಸ್ಪರ್ಧಿಸಲಿದ್ದಾರೆ. ಅದರೊಂದಿಗೆ ಅಮೇಥಿಯಲ್ಲಿ ಸ್ಮೃತಿ ಇರಾನಿ ವರ್ಸಸ್‌ ರಾಹುಲ್‌ ಗಾಂಧಿ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.

Leave a Reply