ಬಿಜೆಪಿಗೆ ಪ್ರಿಯಾಂಕ ಕೊಟ್ಟ ಕೌಂಟರ್ ಹೇಗಿದೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

‘ಕಾಂಗ್ರೆಸ್ ನ 60 ವರ್ಷಗಳ ಸಾಧನೆ ಪ್ರಶ್ನಿಸಿ ಮತ ಪಡೆದ ಬಿಜೆಪಿಗೆ ಜನರೇ ಈಗ ಕಳೆದ ಐದು ವರ್ಷಗಳಲ್ಲಿ ನಿಮ್ಮ ಸಾಧನೆ ಏನು? ಎಂದು ಪ್ರಶ್ನಿಸುತ್ತಿದ್ದಾರೆ’ ಇದು ಜೂನಿಯರ್ ಇಂದಿರಾ ಎಂದೇ ಬಿಂಬಿತವಾಗುತ್ತಿರುವ ಪ್ರಿಯಾಂಕ ವಾದ್ರಾ ಬಿಜೆಪಿ ವಿರುದ್ಧ ಮಾಡಿರುವ ವಾಕ್ಸಮರ.

ಕಾಂಗ್ರೆಸ್‌ನಲ್ಲಿ ಮೋದಿಯ ವಾಗ್ದಾಳಿಗೆ ಪ್ರತ್ಯುತ್ತರ ನೀಡಲು ಯಾರಿಗೂ ಸಾಮರ್ಥ್ಯ ಇಲ್ಲ ಎಂದೇ ಹೇಳಲಾಗ್ತಿತ್ತು. ರಾಹುಲ್ ಗಾಂಧಿ ಮಾತನ್ನು ಲೇವಡಿ ಮಾಡಲಾಗುತ್ತಿತ್ತು. ಆದರೆ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪ್ರಿಯಾಂಕ ಅವರ ಮಾತಿನ ಶೈಲಿ ಬಿಜೆಪಿ ಎದುರಿಸಲು ಸರಿಯಾದ ನಾಯಕಿ ಎಂದು ಬಣ್ಣಿಸಲಾಗುತ್ತಿದೆ.

ಸಕ್ರಿಯ ರಾಜಕೀಯಕ್ಕೆ ಪ್ರಿಯಾಂಕ ಪ್ರವೇಶಿಸಿದ್ದು, ಉತ್ತರ ಪ್ರದೇಶ ಕಾಂಗ್ರೆಸ್‌ನಲ್ಲಿ ಜವಾಬ್ದಾರಿ ನೀಡಲಾಗಿದೆ. ತುಂಬಾ ಚಟುವಟಿಕೆಯಿಂದ ಕೂಡಿರುವ ಪ್ರಿಯಾಂಕ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬೆಂಬಲಿಗರಿಗೆ ಸರಿಯಾದ ಕೌಂಟರ್ ಕೊಟ್ಟಿದ್ದಾರೆ.

ಭಾರತಕ್ಕೆ ಸ್ವತಂತ್ರ ಬಂದ ಬಳಿಕ ಕಾಂಗ್ರೆಸ್ ಅತಿ ಹೆಚ್ಚು ವರ್ಷ ದೇಶವನ್ನು ಆಳ್ವಿಕೆ ನಡೆಸಿದೆ. ಇದು ಸತ್ಯ. ಕಳೆದ ಚುನಾವಣೆಯಲ್ಲೂ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಮಾಡಿದ್ದು ಏನು ಎಂದು ಪ್ರಶ್ನಿಸುತ್ತಲೇ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರು. ಆದ್ರೆ ಇದೀಗ ಮತ್ತೆ ಲೋಕಸಭಾ ಚುನಾವಣೆ ಎದುರಾಗಿದೆ. ಜನ ನರೇಂದ್ರ ಮೋದಿ ಐದು ವರ್ಷಗಳ ಹಿಂದೆ ಕೇಳಿದ್ದ ಪ್ರಶ್ನೆಯನ್ನೇ ತಿರುಗಿಸಿ ಮೋದಿಗೇ ಕೇಳುತ್ತಿದ್ದಾರೆ. 60 ವರ್ಷದಲ್ಲಿ ಕಾಂಗ್ರೆಸ್ ಮಾಡಿದ್ದೇನು ಎಂದು ಅಬ್ಬರಿಸಿ ಬೊಬ್ಬಿರುದು ಅಧಿಕಾರಕ್ಕೆ ಬಂದಿರಲ್ಲ, ಕಳೆದ 5 ವರ್ಷದಲ್ಲಿ ನೀವು ಮಾಡಿದ್ದೇನು ಅನ್ನೋದನ್ನು ಹೇಳಿ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ ಕೊಡ್ತಿರೋ ಬಿಜೆಪಿ ನಾಯಕರು, ಕಾರ್ಯಕರ್ತರು ಸ್ವಾತಂತ್ರ್ಯ ಬಂದಾಗಿನಿಂದ ಹಾಳಾಗಿದ್ದ ದೇಶದ ಆಡಳಿತವನ್ನು ಸರಿದಾರಿಗೆ ತರುವ ಕೆಲಸ ಮಾಡ್ತಿದ್ದಾರೆ. ಇನ್ನೈದು ವರ್ಷ ನರೇಂದ್ರ ಮೋದಿ ಅವರೇ ಪ್ರಧಾನಿ ಆದರೆ ದೇಶವನ್ನು ಅಭಿವೃದ್ಧಿ ಮಾಡ್ತಾರೆ ಎನ್ನುತ್ತಾರೆ. ಬಿಜೆಪಿಯ ಈ ಹೇಳಿಕೆಗೆ ಪ್ರಿಯಾಂಕ ಕೌಂಟರ್ ಕೊಟ್ಟಿದ್ದಾರೆ.

‘ಎಲ್ಲಾ ವಸ್ತುಗಳಿಗೂ ಒಂದು ಎಕ್ಸ್‌ಪೈರಿ ಡೇಟ್ ಇರುತ್ತೆ. ಇಂತಿಷ್ಟು ದಿನಗಳು ಕಳೆದ ಬಳಿಕ ಆ ವಸ್ತುವಿನ ಗುಣಮಟ್ಟ ಹಾಳಾಗುತ್ತದೆ. ಅದೇ ರೀತಿ‌ ಕಳೆದ 5 ವರ್ಷದ ಹಿಂದಿನಿಂದಲೂ ಕಾಂಗ್ರೆಸ್ 60 ವರ್ಷದಲ್ಲಿ ಮಾಡಿದ್ದೇನು ಎಂದು ಪ್ರಶ್ನಿಸುತ್ತಲೇ ಮತ ಪಡೆದಿದ್ದೀರಿ. ಇದೀಗ ನಿಮ್ಮ ಹೇಳಿಕೆ ಎಕ್ಸ್‌ಪೈರಿ ಆಗಿತ್ತು. ತನ್ನ ಮಾನ್ಯತೆಯನ್ನು ಕಳೆದುಕೊಂಡಿದೆ. ಇದೀಗ ಕಳೆದ 5 ವರ್ಷದಲ್ಲಿ ನಿಮ್ಮ ಸರ್ಕಾರ ದೇಶಕ್ಕಾಗಿ ಮಾಡಿದ್ದೇನು ಅನ್ನೋದನ್ನು ದೇಶದ ಎದುರು ಹೇಳಿ’ ಎಂದು ಒತ್ತಾಯ ಮಾಡಿದ್ದಾರೆ.

Leave a Reply