ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್.ವಿ ಶಾರದ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್ ವಿ ಶಾರದ ಗುರುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಾರದ ಅವರು ಶಂಕರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 7.30ಕ್ಕೆ ಶಾರದಾ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಿ.ವಿ ಕಾರಂತ್ ನಿರ್ದೇಶನದ ವಂಶವೃಕ್ಷ ಸಿನಿಮಾದಲ್ಲಿ, ಶಾರದಮ್ಮ ನಟನೆಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು. ಗಿರೀಶ್ ಕಾರ್ನಾಡ್ ಮತ್ತು ಜಿ.ಎಲ್ ಆಯ್ಯರ್ ಅವರ ಹೆಚ್ಚಿನ ಸಿನಿಮಾಗಳಲ್ಲಿ ಹಾಗೂ ಆದಿ ಶಂಕರಾಚಾರ್ಯ, ಮತ್ತು 1983 ರಲ್ಲಿ ತೆರೆಕಂಡ ಫಣಿಯಮ್ಮ ಸಿನಿಮಾಗಳಲ್ಲಿ ನಟಿಸಿದ್ದರು.

ಫಣಿಯಮ್ಮ ಸಿನಿಮಾ ವಿಧವೆಯ ಜೀವನದ ಕುರಿತಾಗಿದ್ದರೂ ವಿಭಿನ್ನ ಕಥಾ ಹಂದರವನ್ನು ಹೊಂದಿದ್ದ ಈ ಚಿತ್ರಗಳಲ್ಲಿ ಪ್ರಭಾವಶಾಲಿ ಅಭಿನಯ ನೀಡಿ ಪಾತ್ರಗಳನ್ನು ಜೀವಂತವಾಗಿಸಿದ್ದರು.

ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರದಲ್ಲಿ ವೈಧವ್ಯವನ್ನು ಒಪ್ಪಿಕೊಂಡು ಹೊಸ ಸಾಧ್ಯತೆಗಳತ್ತ ಚಿಂತನೆ ನಡೆಸುವ ಕಾತ್ಯಾಯಿನಿಯಾಗಿ ಅಭಿನಯಿಸಿದ ರೀತಿ ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು.

Leave a Reply