ಲೋಕಸಭೆಗೆ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಪಟ್ಟಿ ರಿಲೀಸ್..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಕಾಂಗ್ರೆಸ್ ಕೊನೆಗೂ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಎರಡು ಕ್ಷೇತ್ರಗಳಲ್ಲಿ ಇನ್ನೂ ಗೌಪ್ಯತೆ ಕಾಯ್ದುಕೊಂಡಿದೆ.‌

ಒಟ್ಟು 18 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಇನ್ನೆರಡು ಕ್ಷೇತ್ರಗಳಲ್ಲಿ ಇನ್ನೂ ಕೂಡ ಗೊಂದಲ ಮುಂದುವರಿದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಆ ಕಾರಣಕ್ಕಾಗಿ ಟಿಕೆಟ್ ಘೋಷಣೆ ಮಾಡಿಲ್ಲ. ಇನ್ನು ಧಾರವಾಡ ಕ್ಷೇತ್ರದಲ್ಲಿ ಶಾಕೀರ್ ಸನದಿ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಇನ್ನೂ ಘೋಷಣೆ ಆಗಿಲ್ಲ. ಘೋಷಣೆಯಾಗಿರುವ ಪಟ್ಟಿ ಹೀಗಿದೆ…

ಕ್ಷೇತ್ರ: ಮೈತ್ರಿ ಅಭ್ಯರ್ಥಿ

 • ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ
 • ಬೆಳಗಾವಿ: ವಿರುಪಾಕ್ಷಿ ಸಾಧನ್ನವರ್
 • ಬಾಗಲಕೋಟೆ: ವೀಣಾ ಕಾಶಪ್ಪನವರ್
 • ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ
 • ರಾಯಚೂರು: ಬಿ.ವಿ ನಾಯಕ್
 • ಬೀದರ್: ಈಶ್ವರ ಖಂಡ್ರೆ
 • ಕೊಪ್ಪಳ: ರಾಜಶೇಖರ ಹಿಟ್ನಾಳ್
 • ಬಳ್ಳಾರಿ: ವಿ.ಎಸ್ ಉಗ್ರಪ್ಪ
 • ಹಾವೇರಿ: ಡಿ.ಆರ್ ಪಾಟೀಲ್
 • ದಾವಣಗೆರೆ: ಶಾಮನೂರು ಶಿವವಶಂಕರಪ್ಪ
 • ದಕ್ಷಿಣ ಕನ್ನಡ: ಮಿಥುನ್ ರೈ
 • ಚಿತ್ರದುರ್ಗ: ಬಿ.ಎನ್ ಚಂದ್ರಪ್ಪ
 • ಮೈಸೂರು: ವಿಜಯಶಂಕರ್
 • ಚಾಮರಾಜನಗರ ಆರ್. ಧ್ರುವನಾರಾಯಣ್
 • ಬೆಂಗಳೂರು ಗ್ರಾ.: ಡಿ.ಕೆ ಸುರೇಶ್
 • ಬೆಂಗಳೂರು ಕೇಂದ್ರ: ರಿಜ್ವಾನ್ ಅರ್ಷದ್
 • ಚಿಕ್ಕಬಳ್ಳಾಪುರ: ವೀರಪ್ಪ ಮೊಯ್ಲಿ
 • ಕೋಲಾರ: ಕೆ.ಎಚ್ ಮುನಿಯಪ್ಪ

Leave a Reply