ಮೈತ್ರಿ ಧರ್ಮ ಪಾಲಿಸದ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ಗರಂ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ನಾಯಕರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರ ಬಂಡಾಯ ದೊಡ್ಡ ಸವಾಲಾಗಿದೆ. ಮಂಡ್ಯ ಮತ್ತು ಹಾಸನದ ಜತೆ ತುಮಕೂರಿನಲ್ಲೂ ಸ್ಥಳೀಯ ಕಾಂಗ್ರೆಸ್ಸಿಗರು ಜೆಡಿಎಸ್​​ ವಿರುದ್ಧ ಸಮರ ಸಾರುತ್ತಿದ್ದು, ಮೈತ್ರಿ ಧರ್ಮವನ್ನು ಮರೆತು ಬಂಡಾಯವೇಳುತ್ತಿರುವ ಸ್ಥಳೀಯ ನಾಯಕರನ್ನು ನಿಯಂತ್ರಿಸುವಂತೆ ಸಿಎಂ ಕುಮಾರಸ್ವಾಮಿ ಅವರು ಕೆಪಿಸಿಸಿ ​ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಮತ್ತು ಸಚಿವ ಜಮೀರ್​​ ಅಹಮ್ಮದ್​​ ಮುಂದೆಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್​​ ವಿರುದ್ಧ ಕಾಂಗ್ರೆಸ್ ಸಾರುತ್ತಿರುವ ‌ಬಂಡಾಯಕ್ಕೆ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ…

“ನಿಮ್ಮ ಪಕ್ಷದ ಮುಖಂಡರು ನಡೆದುಕೊಳ್ಳುತ್ತಿರುವ ರೀತಿ ಸರಿ ಇದೆಯೇ? ಮೈತ್ರಿ ಆದ ಮೇಲೆ ಒಮ್ಮತದ ಅಭ್ಯರ್ಥಿಗೆ ಬೆಂಬಲ ನೀಡಬೇಕು. ಅಲ್ಲಿನ ಸ್ಥಳೀಯ ಅಭ್ಯರ್ಥಿಗೆ ಕಾಂಗ್ರೆಸ್ ಮುಖಂಡರು ಬೆಂಬಲ ಕೊಡಬೇಕು. ಬೆಂಬಲ ನೀಡಬೇಕಿದ್ದ ಕಾಂಗ್ರೆಸ್​​ ಮುಖಂಡರೇ ಜೆಡಿಎಸ್​​ ವಿರುದ್ಧ ನಿಂತಿದ್ದಾರೆ.

ಇನ್ನು ನಿಮ್ಮ ಪಕ್ಷದ ಮುಖಂಡರು ಹೀಗೆ ನಡೆದುಕೊಂಡರೇ ನಾವು ಹೇಗೆ ಚುನಾವಣೆ ಮಾಡೋದು? ನಾವು ನಿಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದೀವಿ. ಹಾಗೆಯೇ ನಮ್ಮ ಪಕ್ಷದ ಅಭ್ಯರ್ಥಿಗಳ ಬೆನ್ನಿಗೆ ನೀವು ನಿಲ್ಲಬೇಕು. ತುಮಕೂರು ಕ್ಷೇತ್ರದಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿ ಬಂಡಾಯವೆದ್ದು, ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್​​ ಹಾಲಿ ಸಂಸದ ಮುದ್ದಹನುಮೇಗೌಡ ಅವರನ್ನು ಚುನಾವಣೆ ಕಣದಿಂದ ಹಿಂದೆ ಸರೆಯುವಂತೇ ಹೇಳಿ. ಜತೆಗೆ ಜೆಡಿಎಸ್​ ಅಭ್ಯರ್ಥಿಗಾಗಿ ಕೆಲಸ ಮಾಡಲು ಹೇಳಿ.”

Leave a Reply