ಮೋದಿಯೇ ನಮಗೆ ಎದುರಾಳಿ: ರಾಮನಗರದಲ್ಲಿ ಡಿಕೆ ಸುರೇಶ್ ಸವಾಲ್!

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿಕೆ ಸುರೇಶ್ ಅವರು ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ನಮಗೆ ಬಿಜೆಪಿ ಅಭ್ಯರ್ಥಿ ಎದುರಾಳಿಯಲ್ಲ. ಪ್ರಧನಿ ನರೇಂದ್ರ ಮೋದಿ ಅವರೇ ನಮ್ಮ ಎದುರಾಳಿ ಎಂದು ಸವಾಲೆಸೆದಿದ್ದಾರೆ.

ನಾಮಪತ್ರ ಸಲ್ಲಿಕೆ ನಂತರ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಹೇಳಿದ್ದಿಷ್ಟು…

ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಂದಾಗಿದ್ದೇವೆ. ಮಾಗಡಿ, ಚನ್ನಪಟ್ಟಣ, ರಾಮನಗರ, ಆನೆಕಲ್ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕರ್ತು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವತ್ತು ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ರಿಂದ ರಾಹುಲ್ ಗಾಂಧಿವರೆಗೂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಹಿರಿಯರಾದ ದೇವೇಗೌಡರು, ಕುಮಾರಸ್ವಾಮಿ ಹಾಗಬ ಅನಿತಾ ಅವರು ಕೂಡ ಸಂದೇಶ ಕೊಟ್ಟಿದ್ದಾರೆ. ಹೀಗಾಗಿ ನಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರ ಒಗ್ಗಟ್ಟಿನಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಹೀಗಾಗಿ ನಮ್ಮ ಎಲ್ಲಾ ಸಭೆಗಳು ಯಶಸ್ವಿಯಾಗುತ್ತಿದೆ.

ಇಷ್ಟು ದಿನಗಳ ಕಾಲ ನಮ್ಮ ಕ್ಷೇತ್ರಕ್ಕೆ ದುಡಿದಿದ್ದೇನೆ. ಜನರ ವಿಶ್ವಾಸ ಗಳಿಸಿದ್ದೇನೆ. ಅಲ್ಲದೆ ಈ ಬಾರಿ ಮೈತ್ರಿ ಸರಕಾರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿದೆ. ಸರ್ಕಾರದ ಜನಪರ ಯೋಜನೆಗಳು ಮತದಾರಮನಸ್ಸನ್ನು ಗೆದ್ದಿದೆ. ಮುಂದಿನ ತಿಂಗಳು 23ರವರೆಗೂ ಕಾರ್ಯಕರ್ತರು ನಮಗಾಗಿ ದುಡಿಯುತ್ತಾರೆ. ಆನಂತರ ಐದು ವರ್ಷಗಳ ಕಾಲ ನಾನು ಅವರಿಗಾಗಿ ದುಡಿಯುತ್ತೇನೆ.

ಜಿಲ್ಲೆಯಲ್ಲಿ ಕುಡಿಯುವ ನೀರು, ಅಂತರ್ಜಲ ಮ್ಟ ಕುಸಿತ ಸೇರಿದಂತೆ ಸಾಕಷ್ಟು ಸಮಸ್ಯೆ ಇದೆ. ಇವುಗಳನ್ನು ನಿವಾರಿಸಲು ಕಳೆದ ಹಲವು ತಿಂಗಳಿನಿಂದ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಇರ ಭಾಗವಾಗಿ ನಮ್ಮ ಕ್ಷೇತ್ರದ ಎಲ್ಲಾ ತಾಲೂಕುಗಳ 1 ಲಕ್ಷ ಎಕ್ಟೇರ್ ಪ್ರದೇಶಗಳಲ್ಲಿ ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಕೆ ಯೋಜನೆಯನ್ನು ರೂಪಿಸಿದ್ದು ಚುನಾವಣೆ ನಂತರ ಅದು ಜಾರಿಗೆ ಬರಲಿದೆ.

ಈ ಬಾರಿ ಚುನಾವಣೆಯಲ್ಲಿ ನಮಗೆ ಬಿಜೆಪಿ ಅಭ್ಯರ್ಥಿ ಪ್ರತಿಸ್ಪರ್ಧಿ ಅಲ್ಲ. ಅವರು ತಮ್ಮ ವೈಯಕ್ತಿಕ ಸಾಧನೆಯಿಂದ ಜನರಲ್ಲಿ ಮತ ಕೇಳುತ್ತಿಲ್ಲ. ಮೋದಿ ಕೃಪೆಯಿಂದ ಮತ ಕೇಳುತ್ತಿದ್ದಾರೆ. ಹೀಗಾಗಿ ಮೋದಿ ನನಗೆ ಪ್ರತಿಸ್ಪರ್ಧಿ. ಅವರೆ ನಿಂತಿದ್ದಾರೆ ಎಂದು ಭಾವಿಸುತ್ತೇನೆ. ನಮ್ಮ ಸಾಧನೆ ಹಾಗೂ ಕೇಂದ್ರ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳುತ್ತೇವೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಉದ್ದೇಶ.

Leave a Reply