ಸರ್ವಾಧಿಕಾರಿ ಮೋದಿ ಮಣಿಸೋಣ! ಬಿಜೆಪಿ ವಿರುದ್ಧ ದೋಸ್ತಿಗಳ ರಣಕಹಳೆ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಬಾಕಿ ಉಳಿದಿರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ. ಮಾದವಾರದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾವೇಶದ ಮೂಲಕ ರಾಷ್ಟ್ರಕ್ಕೆ ಮೈತ್ರಿ ಸರಕಾರಗಳ ಅಗತ್ಯತೆಯ ಸಂದೇಶ ರವಾನಿಸಿದ ದೋಸ್ತಿಗಳು ಮೋದಿ ಹಾಗೂ ಬಿಜೆಪಿಯನ್ನು ಮಣಿಸಲು ಎಲ್ಲರೂ ಒಂದಾಗಬೇಕು ಎಂದು ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖ ನಾಯಕರ ಮಾತುಗಳು ಹಿಗಿತ್ತು…

ಸಿದ್ದರಾಮಯ್ಯ ವಾಗ್ದಾಳಿ

‘ಮೋದಿ ಮತ್ತೆ ಪ್ರಧಾನಿ ಆಗಲು ಕುತಂತ್ರ ಮಾಡುತ್ತಿದ್ದಾರೆ. ಸರ್ವಾಧಿಕಾರಿ ಮೋದಿಗೆ ಕಡಿವಾಣ ಹಾಕಬೇಕಿದೆ. ಮೋದಿ ಹಾಗೂ ಬಿಜೆಪಿ ದೇಶದ ಸಂವಿಧಾನ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಆದರೆ ದೇಶದ ಜನರು ಪ್ರೌಢರು. ಯಾವಾಗ ದೇಶ ಅಪಾಯಕ್ಕೆ ಸಿಲುಕುತ್ತದೆಯೋ, ಯಾವಾಗ ದೇಶದ ಸಂವಿಧಾನಕ್ಕೆ ಧಕ್ಕೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಹೋರಾಟ ಮಾಡಿದ್ದಾರೆ. ಈಗಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಪೀಗಾಗಿ ಎನ್ ಡಿಎ ಸರ್ಕಾರವನ್ನು ಕೇಂದ್ರದಲ್ಲಿ ತೊಲಗಿಸಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಕಳೆದ ಐದು ವರ್ಷಗಳಲ್ಲಿ ಮೋದಿ ಎಲ್ಲ ಕ್ಷೇತ್ರಗಳಲ್ಲೂ ವಿಫಲ. ಅವರು ಚೌಕಿದಾರ ಆಗಿದ್ದು ದೇಶದ ಅತ್ಯಂತ ದೊಡ್ಡ ಶ್ರೀಮಂತರು ಹಾಗೂ ಬಂಡವಾಳಶಾಹಿಗಳಿಗೆ.

ಎಲ್ಲ ರಾಜ್ಯದ ರೈತರು ಸಾಲಮನ್ನಾ ಮಾಡಿ ಎಂದು ಗೋಗರೆದು ಕೇಳಿದರು ಸಾಲಮನ್ನಾ ಮಾಡಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಸಾಲಮನ್ನಾ ಮಾಡುವಂತೆ ಮನವಿ ಮಾಡಿದರೂ ಕೇಳಲಿಲ್ಲ. ನಮ್ಮ ಜತೆ ಬಂದಿದ್ದ ಬಿಜೆಪಿಯವರು ಮೋದಿ ಮಾತಿಗೆ ತಲೆಯಾಡಿಸಿದರು.

ರಾಹುಲ್ ಅವರು ಈ ಬಾರಿಯ ಪ್ರಣಾಳಿಕೆಯಲ್ಲಿ ಅತ್ಯುತ್ತಮ ಭರವಸೆ ಯೋಜನೆಗಳನ್ನು ಘೋಷಿಸಿದ್ದಾರೆ. ಅದರಲ್ಲಿರುವ ಯೋಜನೆಗಳು ಬಡವರು, ದಲಿತರು, ಹಿಂದುಳಿದ ವರ್ಗ, ಮಹಿಳೆಯರು ಸೇರಿದಂತೆ ಎಲ್ಲರಿಗೂ ಲಾಭವಾಗಲಿದೆ. ದೇಶದಲ್ಲಿ ಕೋಮುವಾದಿ ಶಕ್ತಿಗಳನ್ನು ಮಣಿಸಬೇಕಿದೆ. ಇದಕ್ಕಾಗಿ ದೇಶಕ್ಕೆ ಸಂದೇಶ ರವನಿಸಲು ನಾವು ಈ ಸಭೆ ನಡೆಸಲು ನಿರ್ಧರಿಸಿದೆವು. ಬನ್ನಿ ಎಲ್ಲರೂ ಒಟ್ಟಾಗಿ ಸೇರಿ ಮೋದಿಯನ್ನು ಸೋಲಿಸಿ ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣ ಮಾಡೋಣ.’

ದೇವೇಗೌಡರ ಮಾತುಗಳು

23 ಮೇ 2018ರಂದು ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಮೈತ್ರಿ ಸರ್ಕಾರ ಮಾಡಲು ತೀರ್ಮಾನ. ಇದರ ಮೂಲ ಉದ್ದೇಶ ರಾಷ್ಟ್ರಕ್ಕೆ ಹೊಸ ಸಂದೇಶ ನೀಡುವುದು. ಈ ಸರ್ಕಾರ ಅಧಿಕಾರಕ್ಕೆ ಬರುವ ಕಾರ್ಯಕ್ರಮದ ವೇದಿಕೆ ಮೇಲೆ ಸೋನಿಯಾ, ರಾಹುಲ್ ಸೇರಿದಂತೆ ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರು ಆಗಮಿಸಿದ್ದರು. ನಾವೆಲ್ಲ ಒಂದಾಗಿ ಕೋಮುವಾದಿ ಸರ್ಕಾರವನ್ನು ಹೋಗಲಾಡಿಸಿ ಹಾಗೂ ದೇಶವನ್ನು ಹಿಂದೂರಾಷ್ಟ್ರ ಮಾಡುವ ಆರ್ ಎಸ್ ಎಸ್ ನ ಕಾರ್ಯವನ್ನು ತಡೆಯುವ ಸಂದೇಶ ರವಾನಿಸಲಾಗಿತ್ತು. ಜತೆಗೆ ಇದು ಎಲ್ಲ ವರ್ಗಕ್ಕೂ ಸೇರಿದ ದೇಶ ಎಂದು ಸಂದೇಶ ಸಾರಲು ನಾವು ಮೈತ್ರಿಗೆ ಮುಂದಾಗಿದ್ದೇವೆ.

ಅಂದು ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷದ ನಾಯಕಿ ಸೋನಿಯಾ ಹಾಗೂ ರಾಹುಲ್ ನೇತೃತ್ವದಲ್ಲಿ 21 ಪ್ರಾದೇಶಿಕ ಪಕ್ಷಗಳು ಸೇರಿದಾಗ ಅದನ್ನು ಮೋದಿ ಸಹಿಸಿಕೊಳ್ಳಲಿಲ್ಲ. ಅದನ್ನು ಕೆಟ್ಟ ಶಬ್ಧಗಳಲ್ಲಿ ಟೀಕಿಸಿದರು. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಪ್ರಧಾನಿಯಾಗಿದ್ದಾಗ ನೀಡಿರುವ ಕೊಡುಗೆಯನ್ನು ಅವರು ಮರೆತಿದ್ದಾರೆ. ಎಲ್ಲವನ್ನು ನಾನೇ ಮಾಡಿದ್ದೇನೆ ಎಂದು ಮಾತಾನಾಡುತ್ತಿದ್ದಾರೆ. ಎಲ್ಲವನ್ನು ಗಮನಿಸಿದ್ದೇನೆ.

ಬೆಂಗಳೂರಲ್ಲಿ ಮತ್ತೊಂದು ಜಂಟಿ ಸಭೆಯಾದರೆ ಕಳೆದ ವರ್ಷ ನೀಡಿದ ರೀತಿಯಲ್ಲೇ ಸಂದೇಶ ರವಾನೆಯಾಗಬೇಕು. ಎಲ್ಲ ಧರ್ಮವನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕಿದೆ. 282 ಸೀಟು ಪಡೆದ ಬಿಜೆಪಿ ಕಳೆದ ಐದು ವರ್ಷಗಳಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ. ಕಾಶ್ಮೀರದಲ್ಲಿ ಸೇಕ್ಷನ್ 143 ಜಾರಿ ಮಾಡಿ ಶಾಂತಿ ಹಾಳು ಮಾಡಲಾಗಿದೆ. ಅಲ್ಲಿ ಮತ್ತೆ ಶಾಂತಿ ಸ್ಥಾಪನೆ ಅಗತ್ಯವಿದೆ.’

Leave a Reply