ಡ್ಯಾಮೇಜ್ ಕಂಟ್ರೋಲ್: ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾದ ತೇಜಸ್ವಿನಿ ಅನಂತ್​ಕುಮಾರ್​!

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ತೇಜಸ್ವಿನಿ ಅನಂತ ಕುಮಾರ್ ಅವರನ್ನು ಕಣಕ್ಕಿಳಿಸದ ಬಿಜೆಪಿ ಈಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ಹೀಗಾಗಿ ತೇಜಸ್ವಿ ಅನಂತಕುಮಾರ್ ಅವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹುದ್ದೆಯನ್ನು ನೀಡಲಾಗಿದೆ ಎಂಬ ವರದಿಗಳು ಬಂದಿವೆ.

ಅಚ್ಚರಿಯ ಬೆಳವಣಿಗೆಯಲ್ಲಿ ದಿವಂಗತ ಅನಂತಕುಮಾರ್ ಅವರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರ್ ಎಸ್ ಎಸ್ ಬೆಂಬಲಿತ ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯಾಗಿ ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿತ್ತು.

ಈ ನಿರ್ಧಾರದಿಂದ ತೇಜಸ್ವಿನಿ ಅನಂತಕುಮಾರ್, ಅವರ ಬೆಂಬಲಿಗರು ಮಾತ್ರವಲ್ಲದೆ ರಾಜ್ಯ ಬಿಹೆಪಿಯ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಚುನಾವಣೆ ಪ್ರಚಾರಾದ ಮೇಲೆ ಪ್ರಭಾವ ಬೀರುವ ಆತಂಕ ಸೃಷ್ಟಿಯಾಯಿತು.

ಈ ಎಲ್ಲ ಬೆಳವಣಿಗೆಗಳಿಂದ ಆಗಬಹುದಾದ ನಷ್ಟವನ್ನು ಅರಿತ ಬಿಜೆಪಿ ಹೈಕಮಾಂಡ್, ತೇಜಸ್ವಿನಿ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Leave a Reply