ಮಂಡ್ಯದಲ್ಲಿ ಅಬ್ಬರದ ಪ್ರಚಾರ ಯಾರ್ಯಾರು ಎಲ್ಲೆಲ್ಲಿ ಮತ ಬೇಟೆ?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಪರ ಇಂದು ಕೂಡ ಸ್ಟಾರ್ ಗಳ ಪ್ರಚಾರ ನಡೆಯುತ್ತಿದೆ.

ಚುನಾವಣೆ ಘೋಷಣೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಹಾಗೂ ಯಶ್, ಸುಮಲತಾ ಪಾಲಿಗೆ ನಾವಿಬ್ಬರು ‘ಜೋಡೆತ್ತು’ಗಳ ರೀತಿ ದುಡಿಯುತ್ತೇವೆ ಎಂದಿದ್ರು. ಆ ಪೈಕಿ ದರ್ಶನ್ ನಿನ್ನೆಯಿಂದಲೇ ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ. ಇವತ್ತೂ ಕೂಡ ಮಂಡ್ಯ ನಗರ ಭಾಗದಲ್ಲಿ‌ ಪ್ರಚಾರ ನಡೆಸಲಿದ್ದಾರೆ.

ದರ್ಶನ್ ಚಾಮುಂಡೇಶ್ವರಿ ನಗರ ,ಕಾವೇರಿ ನಗರ, ಹೊಸಳ್ಳಿ, ಕುವೆಂಪು ನಗರ, ವಿವಿ ರಸ್ತೆ, ಕ್ಯಾತನಗೆರೆ ಲೇಔಟ್, ESI ಬಡಾವಣೆ, ಚಿಕ್ಕಮಂಡ್ಯ, ತಾವರೆಗೆರೆ, ಬೀಡಿ ಕಾಲ,ನಿ, ಕುವೆಂಪು ನಗರ, ಸಿಟಿ ಮಾರ್ಕೆಟ್, ಜೈನರ ಬೀದಿ ಕೊಳದ ಬೀದಿಯಲ್ಲಿ ಸುಮಲತಾ ಪರ ಕ್ಯಾಂಪೇನ್ ಮಾಡಲಿದ್ದಾರೆ.

ಇನ್ನು ರಾಕಿಂಗ್ ಸ್ಟಾರ್ ಯಶ್ ಇಂದಿನಿಂದ ಸುಮಲತಾ ಬೆಂಬಲಿಸಿ‌ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. 30 ಗ್ರಾಮಗಳಲ್ಲಿ ಇಂದು ಯಶ್ ಮತಬೇಟೆ ನಡೆಸಲಿದ್ದು ‘ಸ್ವಾಭಿಮಾನಕ್ಕಾಗಿ ನಿಮ್ಮ ಮತ’ ಎಂದು ಘೋಷವಾಕ್ಯ ಮೊಳಗಿಸಲಿದ್ದಾರೆ. ಇಂದಿನಿಂದ ಏಪ್ರಿಲ್ 16ರವರೆಗೆ ‘ಜೋಡೆತ್ತು’ಗಳ ಅಬ್ಬರ ನಡೆಯಲಿದೆ. ಮತ್ತೊಂದು ಕಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಕೂಡ, 37 ಗ್ರಾಮಗಳಲ್ಲಿ ಮತಯಾಚನೆ ಮಾಡಲಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಪ್ರಚಾರದ ಮಾಹಿತಿ ಹೀಗಿದೆ.
ಬೆಳಿಗ್ಗೆ
10:00 – ಎಲೆಚಾಕನಹಳ್ಳಿ
10:30 – ಯಲಿಯೂರು
11:00 – ಕಾಳೇನಹಳ್ಳಿ
11:30 – ಯಲಿಯೂರು ಸರ್ಕಲ್

ಮಧ್ಯಾಹ್ನ
12:00 – ಸಿದ್ದಯ್ಯನಕೊಪ್ಪಲು
12:15 – ಇಂಡವಾಳು
12:45 – ಕಿರಗಂದೂರು
01:00 – ಕ್ಯಾತುಂಗೆರ
01:30 – ಬೇವಿನಹಳ್ಳಿ
02:00 – ಕೊತ್ತತ್ತಿ
02:30 – ಮಂಗಲ
03:00 – ಹೆಬ್ಬಕವಾಡಿ
03:30 – ಲೋಕಸರ
ಸಂಜೆ
04:00 – ಪುರ ತಗ್ಗಹಳ್ಳಿ
04:30 – ಹಳುವಾಡಿ
05:00 – ಚೀರನಹಳ್ಳಿ
05:30 – ಹನಿಯಂಬಾಡಿ
06:00 – ಸಂತೆಕಸಲಗೆರೆ
06:30 – ಕಾರಸವಾಡಿ
ರಾತ್ರಿ
07:00 – ಯತ್ತಗದಹಳ್ಳಿ
07:30 – ಬೂತನಹೊಸೂರು, ಕಬ್ಬನಹಳ್ಳಿ
08:00 – ಸುನಗಹಳ್ಳಿ ಹೆಮ್ಮಿಗೆಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಇನ್ನೂ ಜೋಡೆತ್ತುಗಳ ನಡುವೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕೂಡ ಅಬ್ಬರದ ಪ್ರಚಾರ ನಡೆಸಲಿದ್ದು, ಮಳವಳ್ಳಿ ತಾಲೂಕಿನಲ್ಲಿ ಮತಬೇಟೆ ಮಾಡಲಿದ್ದಾರೆ 15ಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರಚಾರ ನಡೆಸಲಿರುವ ನಿಖಿಲ್ ಬೆಳಗ್ಗೆ 9:00 – ಚಿಕ್ಕಮುಲಗೂಡು, 10:00 – ಮಿಕ್ಕೆರೆ, 11:00 – ಹಿಟ್ಟನಹಳ್ಳಿಕೊಪ್ಪಲು, ಮಧ್ಯಾಹ್ನ 12:00 -ದುಗ್ಗನಹಳ್ಳಿ, 12:30 – ತಳಗವಾದಿ, 1:00- ನೆಲಮಾಕನಹಳ್ಳಿ, 1:30 – ಮತ್ತಿತ್ತಾಳೇಶ್ವರ ದೇ., 2:00 ಅಗಸನಪುರ, 3:00 – ಹುಸ್ಕೂರು ಸಂಜೆ 4:30 ಯತ್ತಂಬಾಡಿ, 5:00- ಅಂತರಹಳ್ಳಿ, 5:30 – ಹುಲ್ಲಹಳ್ಳಿ, 6:00- ಹುಲ್ಲೇಗಾಲ, 6:30 – ದಡಮಹಳ್ಳಿ, ರಾತ್ರಿ 7ಕ್ಕೆ ಬಾಣ ಸಮುದ್ರದಲ್ಲಿ ನಿಖಿಲ್ ಪ್ರಚಾರ ಅಂತ್ಯವಾಗಲಿದೆ.

Leave a Reply