ಡಿಜಿಟಲ್ ಕನ್ನಡ ಟೀಮ್:
ಪ್ರತಿಷ್ಠಿತ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಸೋಮವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಒಟ್ಟು 75 ಅಂಶಗಳು, ಭರವಸೆಗಳನ್ನು ಬಿಜೆಪಿ ಜನರ ಮುಂದೆ ಇಟ್ಟಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದ ಸಮಿತಿ ಈ ಪ್ರಣಾಳಿಕೆ ಸಿದ್ಧ ಪಡಿಸಿದ್ದು, ಮೋದಿ ಇದನ್ನು ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಪ್ರಣಾಳಿಕೆಯ ಪ್ರಮುಖ ಘೋಷಣೆ…
- ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ.
- ರಾಮಮಂದಿರ ನಿರ್ಮಾಣಕ್ಕೆ ಬದ್ಧ.
- ಜಮ್ಮು-ಕಾಶ್ಮೀರದ 370 ಕಾಯ್ದೆ ರದ್ದು.
- ನಕ್ಸಲರ ನಿರ್ಮೂಲನೆ ಮೂಲಕ ಎಡಸಿದ್ಧಾಂತದ ಆತಂಕವಾದಕ್ಕೆ ಬ್ರೇಕ್.
- ಕೃಷಿ ಕ್ಷೇತ್ರದಲ್ಲಿ 25 ಲಕ್ಷ ಕೋಟಿ ಹೂಡಿಕೆ.
- ಸಣ್ಣ-ಮಧ್ಯಮ ರೈತರಿಗೆ ಪೆನ್ಷನ್. 60 ವರ್ಷ ವಯೋಮಾನದ ರೈತರಿಗೆ ಪಿಂಚಣಿ.
- ವಿದ್ಯುತ್ ಉತ್ಪಾದನೆ ಹೆಚ್ಚಳ ಗುರಿ.
- ಪ್ರತಿ ಗ್ರಾಮಪಂಚಾಯಿತಿಗೆ ಹೈ ಸ್ಪೀಡ್ ಇಂಟರ್ನೆಟ್.
- ಅಡುಗೆ ಅನಿಲ ಸಂಪರ್ಕಕ್ಕೆ ಪೈಪಲೈನ್ ವ್ಯವಸ್ಥೆ.
- 75 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ.
- 1400 ಜನರಿಗೆ 1 ಒಬ್ಬರಂತೆ ವೈದ್ಯರ ಸಂಖ್ಯೆ ಹೆಚ್ಚಳ.
- ಅಪೌಷ್ಠಿಕತೆ ವಿರುದ್ಧ ಸಮಗ್ರ ಹೋರಾಟ.
- ಪ್ರತಿ 5 ಕಿ.ಮೀಗೂ ಕೂಡ ಬ್ಯಾಂಕಿಂಗ್ ಸಂಪರ್ಕ.
- ತ್ರಿವಳಿ ತಲಾಖ್ ಜಾರಿಗೆ ಬದ್ಧತೆ.
- ಉದ್ಯೋಗದಲ್ಲಿ ಮಹಿಳೆಯರ ಅವಕಾಶಗಳ ವೃದ್ಧಿ.
- 2022ಕ್ಕೆ ಕ್ಲೀನ್ ಗಂಗಾ ಮಿಷನ್ ಪೂರ್ಣ.
- ವೆಬ್ಸೈಟ್ನಲ್ಲಿ ಸಂಕಲ್ಪ ಪತ್ರ ಲಭ್ಯ.
- ರಾಷ್ಟ್ರೀಯತೆಗೆ ಮೊದಲ ಆದ್ಯತೆ.
- ಉಗ್ರವಾದ ಸಂಪೂರ್ಣ ನಿರ್ಣಾಮಕ್ಕೆ ಕ್ರಮ.
- ಅಕ್ರಮ ನುಸುಳುಕೋರರಿಗೆ ತಡೆ.
- ಯಾವುದೇ ರಾಜ್ಯದ ಸಂಸ್ಕೃತಿಗೆ ಧಕ್ಕೆ ಇಲ್ಲ.
- ಕ್ರೆಡಿಟ್ ಕಾರ್ಡ್ ಮೇಲೆ 1 ಲಕ್ಷದವರೆಗೆ ಸಾಲ.
- ಒಂದು ವರ್ಷದವರೆಗೆ ಈ ಸಾಲಕ್ಕಿಲ್ಲ ಬಡ್ಡಿ.
- 5 ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಗೆ ₹25 ಲಕ್ಷ ಕೋಟಿ.
- ರಾಷ್ಟ್ರೀಯ ವ್ಯಾಪಾರಿ ಆಯೋಗ ರಚನೆ
- ಸಣ್ಣ ವ್ಯಾಪಾರಿಗಳಿಗೂ ಪಿಂಚಣಿ ಯೋಜನೆ.
- ಎಸ್ಸಿ, ಎಸ್ಟಿ, ಮಹಿಳೆಯರು, ಎಲ್ಲರ ಅಭಿವೃದ್ಧಿ.
- ಅಭಿವೃದ್ಧಿ ವಿಚಾರದಲ್ಲಿ ಪ್ರಾದೇಶಿಕ ಅಸಮತೋಲನ ನಿರ್ಮೂಲನೆ.
- ಎಲ್ಲಾ ಚುನಾವಣೆ ಜೊತೆಯಲ್ಲೇ ಆಗ್ಬೇಕು ಅನ್ನೋ ಸಂಕಲ್ಪ. ಲೋಕಸಭೆ-ವಿಧಾನಸಭೆ ಚುನಾವಣೆ ಜೊತೆಯಲ್ಲೇ ನಡೆಸಲು ಚಿಂತನೆ
- ಕೇಂದ್ರ-ರಾಜ್ಯ ಸರ್ಕಾರಗಳ ಸಂಬಂಧ ಸುಧಾರಣೆಗೆ ಕ್ರಮ.
- 2022ರವರೆಗೆ ಹೊಸ ಭಾರತದ ನಿರ್ಮಾಣ.
- ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು. ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಹೆಚ್ಚಳ
- ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ.
- 2022ರ ವೇಳೆಗೆ ಎಲ್ಲಾ ರೈಲು ಮಾರ್ಗ ಬ್ರಾಡ್ಗೇಜ್.