ಮಂಡ್ಯದಲ್ಲಿ ಮೈತ್ರಿ ಪ್ರಚಾರಕ್ಕೆ ಬರಲ್ಲ! ಸಿದ್ದುಗೆ ಚೆಲುವರಾಯಸ್ವಾಮಿ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್:

ಚುನಾವಣೆಗೆ ಬೆರಳೆಣಿಕೆ ದಿನ ಬಾಕಿ ಇದ್ದರು ಮಂಡ್ಯ ಮೈತ್ರಿಯಲ್ಲಿನ ಬಿರುಕು ತಣ್ಣಗಾಗುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಇಂದು ಮಂಡ್ಯದಲ್ಲಿ ಪ್ರಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದ್ದು, ಈ ವೇಳೆ ಅತೃಪ್ತ ನಾಯಕ ಚೆಲುವರಾಯಸ್ವಾಮಿ ಅವರ ಜತೆ ಸಿದ್ದರಾಮಯ್ಯ ಮಾತನಾಡಿದ್ದು ಈ ವೇಳೆ ಯಾವುದೇ ಕಾರಣಕ್ಕೂ ತಾವು ನಿಖಿಲ್ ಪರ ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚೆಲುವರಾಯಸ್ವಾಮಿ ಅವರ ನಿರ್ಧಾರದ ನಂತರ ಸಿದ್ದರಾಮಯ್ಯ ಏಕಾಂಗಿಯಾಗಿ ನಾಗಮಂಗಲಕ್ಕೆ ತೆರಳಿದ್ದು, ದೇವೇಗೌಡರ ಜತೆ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಇದರೊಂದಿಗೆ ಮಂಡ್ಯ ಕೈ ನಾಯಕರ ಮನವೊಲಿಸಲು ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ.

ಇತ್ತ ಮಲವಳ್ಳಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ. ಕೈಗೆ ಪೆಟ್ಟಾಗಿರುವ ಹಿನ್ನೆಲೆಯಲ್ಲಿ ನಿಖಿಲ್ ಪ್ರಚಾರ ಮೊಟಕುಗೊಳಿಸಿದ್ದು, ತಾಯಿ ಅನಿತಾ ಕುಮಾರಸ್ವಾಮಿ ಶ್ರೀರಂಗಪಟ್ಟಣದಲ್ಲಿ ಪ್ರಚಾರ ನಡೆಸಿದ್ದಾರೆ.

Leave a Reply