ವಿಶ್ವ ಕ್ರಿಕೆಟ್ ಸಮರಕ್ಕೆ ಕೊಹ್ಲಿ ಪಡೆ ಪ್ರಕಟ! ಯಾರು ಇನ್, ಯಾರು ಔಟ್!

ಡಿಜಿಟಲ್ ಕನ್ನಡ ಟೀಮ್:

ಇಂಗ್ಲೆಂಡ್‍ನಲ್ಲಿ ಮುಂದಿನ ತಿಂಗಳಾಂತ್ಯದಲ್ಲಿ ನಡೆಯಲಿರುವ ಐಸಿಸಿ ಏಕ ದಿನ ವಿಶ್ವಕಪ್ ಕ್ರಿಕೆಟ್‍ಗೆ ಬಿಸಿಸಿಐ 15 ಆಟಗಾರರ ತಂಡವನ್ನು ಪ್ರಕಟಿಸಿದೆ.

ಕಳೆದ ಒಂದು ವರ್ಷದಲ್ಲಿ ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ಪಿಚ್ ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಈಗಾಗಲೇ ನ್ಯೂಜಿಲೆಂಡ್, ಆಸ್ಟ್ರೇಲಿಯಾ ತಮ್ಮ ತಂಡವನ್ನು ಪ್ರಕಟಿಸಿದ್ದು, ಈಗ ಭಾರತದ ತಂಡ ಪ್ರಕಟಿಸಲಾಗಿದೆ.

ತಂಡದಲ್ಲಿ ಆರಂಭಿಕರಾಗಿ ಶಿಖರ್ ಧವನ್, ರೋಹಿತ್ ಶರ್ಮಾ ಸ್ಥಾನ ಪಡೆದಿದ್ದು, ಹೆಚ್ಚುವರಿ ಆರಂಭಿಕನಾಗಿ ಕರ್ನಾಟಕದ ಕೆ.ಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.

ಟೀಮ್ ಇಂಡಿಯಾ ಹೀಗಿದೆ…
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ ನಾಯಕ), ಶಿಖರ್ ಧವನ್, ವಿಜಯ ಶಂಕರ್, ಕೆ.ಎಲ್.ರಾಹುಲ್, ಎಂ.ಎಸ್.ಧೋನಿ, ಕೇದಾರ್ ಜಾಧವ್, ಕುಲ್‍ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್. ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ಇಶಾಂತ್ ಶರ್ಮ, ಉಮೇಶ್ ಯಾಧವ್, ಇಶನ್ ಕಿಶನ್, ರಿಶಬ್ ಪಂತ್.

Leave a Reply