ಇಂದು ಎರಡನೇ ಹಂತದ ಮತದಾನ, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ 2ನೇ ಹಂತದ ಚುನಾವಣೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸಕಲ ತಯಾರಿ ನಡೆಸಿದೆ. 13 ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಬರೋಬ್ಬರಿ 97 ಕ್ಷೇತ್ರಗಳಲ್ಲಿ 1644 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಆದ್ರೆ ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಕೋಟಿ ಕೋಟಿ ಹಣ ಹಂಚಿಕೆ ಮಾಡಿ ಚುನಾವಣೆ ನಡೆಸುತ್ತಿರೋದು ಬಹಿರಂಗವಾದ ಬಳಿಕ, ಕೇಂದ್ರ ಚುನಾವಣಾ ಆಯೋಗ ಮತದಾನ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.

251 ಅಭ್ಯರ್ಥಿಗಳು 167 ಮಂದಿ ತೀವ್ರತರದ ಕ್ರಿಮಿನಲ್​ ಕೇಸ್​ಗಳನ್ನು ಎದುರಿಸುತ್ತಿದ್ದಾರೆ. ಇನ್ನು 423 ಮಂದಿ ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಇನ್ನು ಎಲ್ಲಾ ಅಭ್ಯರ್ಥಿಗಳ ಆದಾಯವನ್ನು ಅನುಪಾತದ ಆಧಾರದಲ್ಲಿ ನೋಡಿದ್ರೆ ಪ್ರತಿ ಅಭ್ಯರ್ಥಿ 3.9 ಕೋಟಿ ಆದಾಯ ಹೊಂದಿದ್ದಾರೆ. ಈಗಾಗಲೇ ಮೊದಲ ಹಂತದ ಚುನಾವಣೆಯಲ್ಲಿ 20 ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಮೂರನೇ ಹಂತದಲ್ಲಿ 115 ಕ್ಷೇತ್ರ, ನಾಲ್ಕನೇ ಹಂತದಲ್ಲಿ 71 ಕ್ಷೇತ್ರ, ಐದನೇ ಹಂತದಲ್ಲಿ 51 ಕ್ಷೇತ್ರ, ಆರನೇ ಹಂತದಲ್ಲಿ 59 ಕ್ಷೇತ್ರ, ಏಳನೇ ಹಂತದಲ್ಲಿ 59 ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬೀಳಲಿದೆ.

ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಇದರಲ್ಲಿ ಬಿಜೆಪಿ 13 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದೆ. ಇನ್ನು ಮೈತ್ರಿ ಸರ್ಕಾರದಲ್ಲಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ರೆ, ಇನ್ನುಳಿದ 4 ಕ್ಷೇತ್ರಗಳಲ್ಲಿ ಜೆಡಿಎಸ್​ ಅಭ್ಯರ್ಥಿಗಳು ಸ್ಫರ್ಧೆ ಮಾಡಿದ್ದಾರೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಅಂದ್ರೆ ಹಳೇ ಮೈಸೂರು ಭಾಗದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದ್ದು, ಉತ್ತರ ಕರ್ನಾಟಕದ 14 ಕ್ಷೇತ್ರದಲ್ಲಿ ಏಪ್ರಿಲ್​ 23ರಂದು ಚುನಾವಣೆ ನಡೆಯಲಿದೆ.

Leave a Reply