ಬೆಂಗಳೂರಿನಲ್ಲಿ ನೀರಸ ಮತದಾನ..? ಯಾರಿಗೆ ಲಾಭ..?

ಡಿಜಿಟಲ್ ಕನ್ನಡ ಟೀಮ್:

ಭಾರತ ದೇಶದಲ್ಲಿ 2ನೇ ಹಂತದ ಹಾಗೂ ಕರ್ನಾಟಕದಲ್ಲಿ ಮೊದಲನೇ ಹಂತದ ಚುನಾವಣೆ ಮುಕ್ತಾಯವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ  ಮುಕ್ತಾಯವಾಗಿದೆ. ಮತದಾನದ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಗುರುವಾರ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕುಸಿತ ಕಂಡಿದೆ.

ಇನ್ಫೆಂಟ್ರಿ ರಸ್ತೆಯ ವಾರ್ತಾ ಸೌಧದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯುಕ್ತ ಸಂಜೀವ ಕುಮಾರ್ ಹೇಳಿದಿಷ್ಟು. ರಾಜ್ಯದ 14 ಕ್ಷೇತ್ರಗಳ 2 ಕೋಟಿ 68 ಲಕ್ಷ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಎರಡು ಕೋಟಿ ಮತದಾರರಿಗೆ ಚುನಾವಣಾ ಆಯೋಗವೇ ವೋಟರ್ ಸ್ಲೀಪ್ ನೀಡಿತ್ತು. 330 ಅಭ್ಯರ್ಥಿಗಳ ಪೈಕಿ 310 ಮಂದಿ ಪುರುಷರು, 20 ಮಂದಿ ಮಹಿಳಾ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಮ್ ಸೇರಿದೆ.

ಶೇಕಡಾವಾರು ಮತದಾನ ಈ ರೀತಿ ಇದೆ…

 • ಉಡುಪಿ ಚಿಕ್ಕಮಗಳೂರು – 80%
 • ಹಾಸನ 55%
 • ದಕ್ಷಿಣ ಕನ್ನಡ 22
 • ಚಿತ್ರದುರ್ಗ 03%
 • ತುಮಕೂರು 03%
 • ಮಂಡ್ಯ 77%
 • ಮೈಸೂರು 87%
 • ಚಾಮರಾಜನಗರ 53
 • ಬೆಂಗಳೂರು ಗ್ರಾಮಾಂತರ 06%
 • ಬೆಂಗಳೂರು ಉತ್ತರ 28%
 • ಬೆಂಗಳೂರು ಕೇಂದ್ರ 31%
 • ಬೆಂಗಳೂರು ದಕ್ಷಿಣ 36%
 • ಚಿಕ್ಕಬಳ್ಳಾಪುರ 45%
 • ಕೋಲಾರ 61

ಇವಿಎಂ ಜೊತೆಗೆ ವಿವಿಪ್ಯಾಟ್ ಯಶಸ್ವಿಯಾಗಿ ಬಳಕೆ ಮಾಡಲಾಗಿದೆ. ಉಡುಪಿ ಚಿಕ್ಕಮಗಳೂರಲ್ಲಿ ಮತದಾನ ಕಳೆದ ಬಾರಿಗಿಂತ ಹೆಚ್ಚಳವಾಗಿದೆ. ದಕ್ಷಿಣ ಕನ್ನಡದಲ್ಲಿ ಈ ಬಾರಿ ಪ್ರತಿಶತ ಮತದಾನ ಹೆಚ್ಚಾಗಿದೆ. ತುಮಕೂರಿನಲ್ಲೂ ಈ ಬಾರಿ ಮತದಾನ ಪ್ರಮಾಣ ಹೆಚ್ಚಳವಾಗಿದೆ. ಮಂಡ್ಯದಲ್ಲಿ ಈ ಬಾರಿ ಪ್ರತಿಶತ 9ರಷ್ಟು ಹೆಚ್ಚಳವಾಗಿದ್ದು, ಮೈಸೂರಿನಲ್ಲಿ ಶೇಕಡ 1ರಷ್ಟು ಹೆಚ್ಚಳವಾಗಿದೆ. ಇನ್ನೂ ಬೆಂಗಳೂರು ಗ್ರಾಮಾಂತರದಲ್ಲೂ ಮತದಾನ ಹೆಚ್ಚಳವಾಗಿದೆ. ಆದ್ರೆ ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಬೆಂಗಳೂರು ನಾರ್ತ್, ಬೆಂಗಳೂರು ಸೆಂಟ್ರಲ್, ಬೆಂಗಳೂರು ಸೌತ್‌ನಲ್ಲಿ ಮತದಾನ ಕುಸಿತವಾಗಿದೆ.

ಸಾಲು ಸಾಲು ರಜೆಗಳು ಬಂದಾಗಲೇ ಮತದಾನ ಪ್ರಮಾಣ ಕಡಿಮೆ ಆಗಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಅದೇ ರೀತಿ ಮತದಾನ ಕಡಿಮೆ ಆಗಿದೆ. ಬೆಂಗಳೂರಿನ ಮತದಾನವನ್ನು ಕಡ್ಡಾಯವಾಗಿ ಮಾಡೋದು ಸ್ಲಂ ನಿವಾಸಿಗಳು, ಕೂಲಿ ಕಾರ್ಮಿಕರು, ಬಡವರು ಹಾಗೂ ಶ್ರಮಿಕರ ವರ್ಗ. ಈ ವರ್ಗದ ಮತದಾರ ಮತದಾನ ಮಾಡಿದರೆ ಕಾಂಗ್ರೆಸ್ ಪಾಲಿಗೆ ವರ ಅನ್ನೋದು ಜನಜನಿತ. ಯಾಕಂದ್ರೆ ಮೇಲ್ವರ್ಗದ ಜನತೆ ಬಿಜೆಪಿ ಪರವಾಗಿ ನಿಲ್ತಾರೆ, ಅದರಲ್ಲೂ ಐಟಿ ಬಿಟಿ ವರ್ಗವಂತು ಮೋದಿಗೆ ಉಘೇ ಎನ್ನುತ್ತೆ. ಆದ್ರೆ ಇಂದಿನ ಮತದಾನ ಕುಂಠಿತಕ್ಕೆ ಪ್ರಮುಖ ಕಾರಣ ಐಟಿ ಬಿಟಿ ವರ್ಗ. ಹೀಗಾಗಿ ಬಿಜೆಪಿಗೆ ಶೇಕಡವಾರು ಮತಗಳು ಕಡಿಮೆ ಆಗಿರಬಹುದು ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಈ ಲೆಕ್ಕಾಚಾರ ಸರಿಯಾದರೆ ಬೆಂಗಳೂರಿನ ಮೂರು ಕ್ಷೇತ್ರಗಳ ಪೈಕಿ ಬಿಜೆಪಿ ಗೆಲುವು ಕಷ್ಟವಾದರೂ ಅಚ್ಚರಿ ಏನಲ್ಲ ಎನ್ನುತ್ತಿದೆ ರಾಜಕೀಯ ವಲಯ.

Leave a Reply