ಜೈಲು ಹಕ್ಕಿ ಗಣೇಶ್‌ಗೆ ಬಿಡುಗಡೆ ಭಾಗ್ಯ!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲಕ್ಕೆ ಬೆದರಿ ಈಗಲ್ಟನ್ ರೆಸಾರ್ಟ್ ಸೇರಿದ್ದ ಕಾಂಗ್ರೆಸ್ ಶಾಸಕರು ಬಡಿದಾಡಿ ಕೊಂಡಿದ್ರು.‌ ಆ ಬಳಿಕ ಒಂದು ತಿಂಗಳು ನಾಪತ್ತೆಯಾಗಿ ಕೊನೆಗಯು ಗುಜರಾತ್‌ನ ಸೋಮನಾಥದಲ್ಲಿ ಖಾಕಿ ಬಲೆಗೆ ಬಿದ್ದಿದ್ರು.‌ ಆ ನಂತ ಪರಪ್ಪನ ಅಗ್ರಹಾರ ಸೇರಿದ್ದ ಕಂಪ್ಲಿ ಶಾಸಕ ಗಣೇಶ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ರು. ಆ ಬಳಿಕ ದೀರ್ಘಕಾಲದ ನಂತರವೂ ಜಾಮೀನು ಸಿಗದ ಕಾರಣ ಖಿನ್ನತೆಗೂ ಒಳಗಾಗಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ರು.‌ ಇದೆಲ್ಲಾ ಸಂಕಷ್ಟಕ್ಕೆ ಅಂತ್ಯವಾಡುವ ಕಾಲ ಒದಗಿ ಬಂದಿದ್ದು, ಜೈಲು ಹಕ್ಕಿ ಕಂಪ್ಲಿ ಗಣೇಶ್‌ಗೆ ಜಾಮೀನು ಮಂಜೂರಾಗಿದೆ.

ಕಂಪ್ಲಿ ಕಾಂಗ್ರೆಸ್ ಶಾಸಕ ಜೆ ಎನ್ ಗಣೇಶ್ ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಈ ವರ್ಷದ ಜನವರಿ 19ರ ರಾತ್ರಿ ಘಟನೆ ನಡೆದಿತ್ತು. ಬಳಿಕ ಫೆಬ್ರವರಿ 20 ರಂದು ಗಣೇಶ್ ಸೋಮನಾಥದಲ್ಲಿ ಅರೆಸ್ಟ್ ಆಗಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಗಣೇಶ್ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ನಂತ್ರ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ರು. ಇದೀಗ ಷರತ್ತು ಬದ್ಧ ಜಾಮೀನು ಮಂಜೂರಾಗಿದ್ದು, ಜೈಲುಹಕ್ಕಿ ಸ್ವಚ್ಛಂದವಾಗಿ ಹಾರಬಹುದಾಗಿದೆ.

ಎರಡು ಲಕ್ಷ ಬಾಂಡ್ ಹಾಗೂ ಇಬ್ಬರು ಶೂರಿಟಿ ಪಡೆದು ಶಾಸಕ ಗಣೇಶ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡಬಾರದು ಹಾಗೂ ಮತ್ತೆ ಇಂತ ಪ್ರಕರಣದಲ್ಲಿ ಭಾಗಿಯಾಗದಂತೆ ಶಾಸಕ ಗಣೇಶ್ ಗೆ ಹೈಕೋರ್ಟ್ ಎಚ್ಚರಿಕೆಯ ಸೂಚನೆ ನೀಡಿದೆ.

Leave a Reply