ನಾಟಕರತ್ನ ಹಿರಣ್ಣಯ್ಯ ಅವರ ಜೀವನ ಹಾದಿ ಮೆಲುಕು

ಡಿಜಿಟಲ್ ಕನ್ನಡ ಟೀಮ್:

ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಇನ್ನು ನೆನಪು ಮಾತ್ರ. ಈ ಸಂದರ್ಭದಲ್ಲಿ ಅವರ ಜೀವನ ಹಾದಿಯ ಮೆಲುಕು ಹೀಗಿದೆ…

 • ಫೆಬ್ರವರಿ 15, 1938ರಲ್ಲಿ ಮೈಸೂರಿನಲ್ಲಿ ಜನನ.
 • ಮೂಲ ಹೆಸರು ನರಸಿಂಹಮೂರ್ತಿ
  ಕಲ್ಚರ್ಡ್ ಕಾಮಿಡಿಯನ್​ ಎಂದು ಪ್ರಖ್ಯಾತಿ.
 • ಕೆ. ಹಿರಣ್ಣಯ್ಯ & ಶಾರದಮ್ಮ ದಂಪತಿಗಳ ಏಕೈಕ ಪುತ್ರ.
 • ಇಂಟರ್ ಮೀಡಿಯೆಟ್ ಶಿಕ್ಷಣ. 1952ರಲ್ಲೇ ತಂದೆಯಿಂದಲೇ ರಂಗಶಿಕ್ಷಣ.
 • ಬಾಲ್ಯದಲ್ಲೇ ತಂದೆ ಮದರಾಸಿಗೆ ಪಯಣ. ಹೀಗಾಗಿ ತಮಿಳು, ತೆಲುಗು, ಇಂಗ್ಲಿಷ್ ಭಾಷೆ ಅಭ್ಯಾಸ.
 • ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತದ ಸ್ತೋತ್ರ ಪ್ರವಚನ.
 • ಮೈಸೂರಿಗೆ ವಾಪಸ್​ ಬಂದು ಬನುಮಯ್ಯ ಶಾಲೆಗೆ ಸೇರ್ಪಡೆ.
 • ‘ಸಾಧ್ವಿ’, ‘ಮೈಸೂರು ಪತ್ರಿಕೆ’ ಹಂಚುತ್ತಾ ದುಡಿಮೆ ಆರಂಭ.
 • ಅಭಿನಯದಲ್ಲಿ ಗೆದ್ದು ಪರೀಕ್ಷೆಯಲ್ಲಿ ಹಿರಣ್ಣಯ್ಯ ಫೇಲ್​.
 • 1940ರಲ್ಲಿ ‘ವಾಣಿ’ ಚಿತ್ರದ ಮೂಲಕ ಹಿರಣ್ಣಯ್ಯ ಪಾದಾರ್ಪಣೆ ತಂದೆ ಕೆ. ಹಿರಣ್ಣಯ್ಯ ರಚಿಸಿ, ನಿರ್ದೇಶಿಸಿದ ಚಲನಚಿತ್ರ.
 • 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋಲು.
 • ಕಾಲೇಜಿನಲ್ಲಿ ಸಂಘ ಕಟ್ಟಿ ‘ಆಗ್ರಹ’ ಎಂಬ ನಾಟಕ ಪ್ರದರ್ಶನ. ನಾಟಕಕ್ಕೆ ಭರ್ಜರಿ ಜಯ.
 • 1953ರಲ್ಲಿ ತಂದೆ ನಿಧನದ ಬಳಿಕ ಸಂಪೂರ್ಣ ಜವಾಬ್ದಾರಿ. ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ ವಹಿಸಿಕೊಂಡ ಹಿರಣ್ಣಯ್ಯ.
 • ತಂದೆ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರಿಂದ ಸಹಾಯ. ಸ್ನೇಹಿತರ ಸಹಾಯದಿಂದ ನಾಟಕ ಕಂಪನಿ ಕಟ್ಟಿದ ಹಿರಣ್ಣಯ್ಯ ನಾಟಕ ಕಂಪನಿಯಿಂದ ಹಿರಣ್ಣಯ್ಯಗೆ ಆರ್ಥಿಕ ನಷ್ಟ.
 • ‘ಹಿರಣ್ಣಯ್ಯ ಮಿತ್ರ ಮಂಡಲಿ’ ಮೂಲಕ ಮತ್ತೆ ‘ಲಂಚಾವತಾರ’ ನೂತನ ನಾಟಕ ರಚಿಸಿ ರಂಗ ಪ್ರಯೋಗ ಮಾಡಿದ ಹಿರಣ್ಣಯ್ಯ.
 • ಜನಪ್ರಿಯತೆ ಜೊತೆಗೆ ಮಹಾರಾಜರಿಂದ ‘ನಟರತ್ನಾಕರ’ ಬಿರುದು .
 • ‘ಲಂಚಾವತಾರ’ ನಾಟಕ 11 ಸಾವಿರಕ್ಕೂ ಹೆಚ್ಚು ಪ್ರದರ್ಶನದ ದಾಖಲೆ.
 • ‘ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ ಅಭಿನಯ.
 • ‘ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ ಪಾತ್ರ, ‘ಸದಾರಮೆ’ಯಲ್ಲಿ ಕಳ್ಳನಾಗಿ ಆದಿಮೂರ್ತಿ ಪಾತ್ರ ನಿರ್ವಹಣೆ.
 • ‘ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ ಪಾತ್ರ.
 • ‘ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯ ಖ್ಯಾತಿ.
 • ಅಭಿನಯ ಅಲ್ಲದೆ ‘ದೇವದಾಸಿ’, ‘ಅನಾಚಾರ’, ‘ಅತ್ಯಾಚಾರ’,ವ್’ಕಲ್ಕ್ಯಾವತಾರ’, ‘ಅಮ್ಮಾವ್ರ ಅವಾಂತರ’, ‘ಪುರುಷಾಮೃಗ’ ನಾಟಕ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದ ಕೀರ್ತಿ.
 • ನಾಟಕಗಳ ಮುಖೇನ ಹಿರಣ್ಣಯ್ಯ ವೈಚಾರಿಕ ಕ್ರಾಂತಿ. ರಾಜಕೀಯದ ಅಂಕು ಡೊಂಕುಗಳ ಬಗ್ಗೆ ವಿಚಾರ ಕ್ರಾಂತಿ.
 • ಅಂದಿನ ಸಿಎಂ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ಟೀಕೆ. ಹಲವಾರು ಕೇಸ್​ನಲ್ಲಿ ಕೋರ್ಟ್ ಕಟಕಟೆ ಹತ್ತಿದ ಹಿರಣ್ಣಯ್ಯ. ಸುಪ್ರೀಂಕೋರ್ಟ್​ ತನಕ ಹೋಗಿ ನ್ಯಾಯ ಪಡೆದ ಹಿರಣ್ಣಯ್ಯ.
 • ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು, ಕನ್ನಡದ ಬಗ್ಗೆ, ಕನ್ನಡದ ಸಾಮಾನ್ಯ ಜನರ ಬಗ್ಗೆ ತುಂಬಾ ಕಾಳಜಿ.
 • ಮಾಸ್ಟರ್​ ಹಿರಣ್ಣಯ್ಯಗೆ ಲೆಕ್ಕವಿಲ್ಲದ ಪ್ರಶಸ್ತಿ ಗೌರವಗಳು ಲಭಿಸಿವೆ.
 • ಅತ್ಯುನ್ನತ ರಂಗ ಪ್ರಶಸ್ತಿ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿ ಪುರಸ್ಕಾರ.
 • ದೇಶ ವಿದೇಶಗಳಲ್ಲಿರುವ ಕನ್ನಡಿಗರಿಂದಲೂ ಹಲವು ಗೌರವ… ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ, ‘ಕಲಾಗಜ ಸಿಂಹ’ಬಿರುದು, ರಾಜರಿಂದ ‘ನಟ ರತ್ನಾಕರ’ ಬಿರುದು.
 • ಮಾಸ್ಟರ್ ಹಿರಣ್ಣಯ್ಯ ಅಭಿನಯಿಸಿದ ನಾಟಕಗಳು ಹೀಗಿವೆ… ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ ನಾಟಕದಲ್ಲಿ ಪಾತ್ರ.

Leave a Reply